ಶ್ರೀ ಲಾಲ್ ಬಹಾದ್ದೂರ್ ಶಾಸ್ತ್ರೀ ಅವರ ಪುಣ್ಯ ತಿಥಿ


ರಚನೆ  - ತಿಲಕ್ 
ಅದು ೧೯೬೪ ಮಧ್ಯಂತರ ವರುಷ, ಆಗಿನ ಪ್ರಧಾನಿ ತಮ್ಮ ಮುಂದಿನ successor ಅನ್ನು ತಯಾರು ಮಾಡದೆ ಇಹ ಲೋಕ ತ್ಯಜಿಸಿದ ಘಳಿಗೆ. ನೆಹರು ನಂತರ ಯಾರು? ಎಂಬ ಅಖಂಡ ಪ್ರಶ್ನೆಗೆ ಶೀರ್ಷೆಕೆಯಂತೆ ಸಿಕ್ಕ ಉತ್ತರವೇ ಲಾಲ್ ಬಹಾದ್ದೂರ್ ಶಾಸ್ತ್ರೀ. ನಮ್ಮ ದೇಶ ಕಂಡ ಅತ್ಯಂತ ಪ್ರಭಾವಶಾಲಿ, ಶಕ್ತಿಶಾಲಿ, ಯುಕ್ತಿಶಾಲಿ ಪ್ರಧಾನಮಂತ್ರಿಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವವರೇ ಐದು ಅಡಿ ಒಂದು ಅಂಗುಲದ ಸಾಮಾನ್ಯ ಸರಳ ಸಜ್ಜನಿಕೆಯ ವ್ಯಕ್ತಿ ಶ್ರೀ ಲಾಲ್ ಬಹಾದ್ದೂರ್ ಶಾಸ್ತ್ರೀ ಅವರು.


ಇಂದು ಅವರ ಪುಣ್ಯ ತಿಥಿ. ತಾಷ್ಕೆಂಟ್ನಲ್ಲಿ ನಿಗೂಢವಾಗಿ ಸಾವನ್ನಪ್ಪಿ ಇಂದಿಗೆ ಸರಿಯಾಗಿ ೫೪ ವರುಷಗಳು. ೧೯೬೫ ರಲ್ಲಿ ಗುಜರಾತ್ ರಾಜ್ಯದ ಕಚ್ ಪ್ರಾಂತ್ಯದಲ್ಲಿ ಪಾಪಿ ಪಾಕಿಸ್ತಾನದ M48 ಪಟ್ಟೋನ್ ಟ್ಯಾಂಕ್ ಗಳನ್ನು ದ್ವಾಂಸ ಮಾಡಿ, ಪಾಕಿಸ್ತಾನಕ್ಕೆ ನುಗ್ಗಿ ಅವರನ್ನು ಸದೆಬಡಿದು ವಿಜಯ ಪತಾಕೆ ಹಾರಿಸಿದ ಕೀರ್ತಿ ಶಾಸ್ತ್ರೀ ಅವರಿಗೆ ಸಲ್ಲುತ್ತದೆ. ಕಾಶ್ಮೀರವನ್ನು, ಪಂಜಾಬ್ ಅನ್ನು  ತನ್ನ ತೆಕ್ಕೆಗೆ ಹಾಕಿಕೊಂಡು, ದಿಲ್ಲಿ ಯಲ್ಲಿ ಊಟ ಮಾಡುವ ಆಸೆಯನ್ನು ಹೊತ್ತಿದ್ದ ಅಂದಿನ ಪಾಕಿಸ್ತಾನದ ಪ್ರಧಾನಿ ಆಯುಬ್ ಖಾನ್ ಅವರನ್ನು ವಿಶ್ವದ ಮುಂದೆ ಭಿಕಾರಿಯಂತೆ ರಕ್ಷಣೆಯ ಭಿಕ್ಷೆ ಕೇಳುವ ಹಾಗಿ ಮಾಡಿದವರು ಇವರೇ. ಆದರೆ ವಿಜಯ ಯಾತ್ರೆ ಸುಮ್ಮನೆ ಬರಲಿಲ್ಲ, ಅದಕ್ಕಾಗಿ ಸಾವಿರಾರು ಯೋಧರು ತಮ್ಮ ಪ್ರಾಣವನ್ನು ತಾಯ್ನಾಡಿನ ರಕ್ಷಣೆಗೆ ಜೀವ ಕೊಟ್ಟಿದ್ದಾರೆ.
ತಾಷ್ಕೆಂಟ್ನಲ್ಲಿ ಪಾಕಿಸ್ತಾನ ಹಾಗು ಭಾರತ ಯುದ್ಧ ನೀತಿಗಳಿಗೆ ಸಹಿ ಹಾಕಲು ಹೋದ ಶಾಸ್ತ್ರೀಯವರು ಮತ್ತೆ ಜೀವಂತವಾಗಿ ತಾಯ್ನಾಡಿಗೆ ಬರಲೇ ಇಲ್ಲ. ತಿನ್ನುವ ಊಟದಲ್ಲೋ, ಕುಡಿಯುವ ನೀರಿನಲ್ಲೋ ವಿಷ ಬೆರೆಸಲಾಗಿತ್ತು. ಭಾರತಕ್ಕೆ ಅವರ ನೀಲಿಗಟ್ಟಿದ್ದ ಪಾರ್ಥಿವ ಶರೀರ ಬಂದದಮೇಲೂ ಒಂದು ಮರಣೋತ್ತರ ಪರೀಕ್ಷೆ ಸಹ ನೆಡೆಸದೆ ಹೋದದ್ದು ಅನೇಕ ಅನುಮಾನಗಳಿವೆ ಬಾಗಿಲು ತೆರೆದು ಕೊಂಡವು. ಅನುಮಾನೋಸ್ಪದವಾಗಿ ತೀರಿ ಹೋದದ್ದು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶದ ಪ್ರಧಾನಿ, ಆದರೆ ಅದಕ್ಕೆ ಕಾರಣ ಮಾತ್ರ ನಿಗೂಢ.


ಒಮ್ಮೆ ಅಮೇರಿಕವನ್ನು ಎದಿರು ಹಾಕಿಕೊಂಡ ಭಾರತದ ಪ್ರಧಾನಿ ಅವರಿಂದ ಆಮದು ಮಾಡಿಕೊಳ್ಳುತ್ತಿದ್ದ ದವಸಗಳು ನಮಗಿನ್ನೂ ಬೇಕಿಲ್ಲ ಎಂದು ಘೋಷಿಸಿ, ದೇಶದ ಜನರಿಗೆ ಸೋಮವಾರ ಒಂದು ಹೊತ್ತು ಉಪವಾಸ ಇರೋಣ ಏನು ಹೇಳಿದಾಗ ಅವರ ಮಾತಿಗೆ ಸಮ್ಮತಿ ಸೂಚಿಸದವರೇ ಇಲ್ಲ.. ಇಂದು ಸಹ  ಅನೇಕ ಜನ ಸೋಮವಾರ ಒಂದೊತ್ತು ಉಪವಾಸ ಮಾಡುತ್ತಾರೆ ಎಂದರೆ ನಂಬಲಸಾಧ್ಯ. ಮೊನ್ನೆ ಮೊನ್ನೆ ಅಮೇರಿಕಾ ದೇಶ ಪ್ರವಾಹದಲ್ಲಿ ತತ್ತರಿಸಿದ್ದಾಗ ನಮ್ಮ ದೇಶ ಆಹಾರೋತ್ಪನ್ನಗಳನ್ನೂ ರಪ್ತು ಮಾಡಿದಾಗ ಅದೆಷ್ಟೋ ಜನ ಇಂದು ನಾವು ಸ್ವಾವಲಂಬಿಗಳಾಗಿದ್ದೇವೆ, ಬೇರೊಬ್ಬರಿಗೆ ಆಹಾರ ಒದಗಿಸುವಷ್ಟು ಭಾರತ ಬೆಳೆದಿದೆ ಎಂದು ಖುಷಿ ಪಟ್ಟು, ಅಂದು ಲಾಲ್ ಬಹಾದ್ದೂರ್ ಶಾಶ್ತ್ರೀ ಅವರ ಉಪವಾಸದ ದಿನಗಳಿಗೆ ತಿಲಾಂಜಲಿ ಹಾಡಿದರು. ಅದೇನೇ ಆಗಲಿ ಅವರ ಸಾವಿಗೆ ಉತ್ತರ ಸಿಕ್ಕದೆ ಹೋದದ್ದು ಒಂದು ರಾಜಕೀಯ ಒಳ ಸಂಚು ಎಂದು ತುಂಬ ಸಪಷ್ಟವಾಗಿ ಕಾಣಿಸುತ್ತದೆ. 

Comments