ಪುತ್ರ ಶೋಕಂ ನಿರಂತರಂ ಅನ್ನೋ ಮಾತು ನೆನಪಿದೆಯೇ?

ರಚನೆ - ತಿಲಕ್ 

ಸೆಲೆ - ತೇಜಸ್ವಿ 

ದೇಶ ಇಬ್ಬಾಗವಾಗೋದು ಯಾವಾಗ? ಒಂದು ದೊಡ್ಡ ಸೈನ್ಯ ದಂಡೆತ್ತಿ ಬಂದಾಗ, ಮತ್ತೊಂದು ದೇಶವನ್ನ ರಾಜಕೀಯವಾಗಿ ಗುಂಡಿಗೆ ನೂಕಿದಾಗ, ಮಗದೊಂದು, ಒಂದು ಸುಸಂಸ್ಕೃತ ದೇಶವನ್ನ ಧರ್ಮಾನುಸಾರವಾಗಿ ಒಡೆದಾಗ. ನಮ್ಮ ಈಗಿನ ಪರಿಸ್ಥಿತಿಯನ್ನು ಅವಲೋಕಿಸಿದಾಗ ದೇಶ ಕೊತ-ಕೊತ ಕುದಿಯುತಿರುವುದು ಧರ್ಮ ಎಂಬ ಅಂಶದಿಂದಾಗಿ. ಇಲ್ಲಿ ಯಾವ ಧರ್ಮವು ದೊಡ್ಡದಲ್ಲ, ಯಾವುದು ಚಿಕ್ಕದಲ್ಲ. ಮೊದಲು ನನ್ನ ದೇಶ, ನಂತರ ನನ್ನ ಧರ್ಮ ಎಂಬುದನ್ನ ಎಲ್ಲ ಅರ್ಥೈಸಿಕೊಂಡರೆ ಶರತ್ ಮಡಿವಾಳ ಎಂಬ ಯುವಕನಾಗಲಿ, ದಾದ್ರಿಯಲ್ಲಿ ಮೊಹಮ್ಮದ್  ಇಖ್ಲ್ಯಾಕ್  ಎಂಬ ಅಮಾಯಕ ಮುಸಲ್ಮಾನನ್ನ ಕಗ್ಗೊಲೆಯಾಗುತ್ತಿರುಲಿಲ್ಲ. 




ಇಲ್ಲಿ ಹೇಳ ಹೊರಟಿರುವ ವಿಷಯವು ಇದೆ ಆಗಿದೆ. ಮೊನ್ನೆ ಮೊನ್ನೆಯಷ್ಟೇ ಶರತ್ ಎಂಬ ಮಧ್ಯವಯಸ್ಕನನ್ನು ಹಾಡು ಹಗಲೇ ಜೀವಕ್ಕೆ ಬೆಲೆ ಇಲ್ಲಯವೆಂಬಂತೆ  ಕೊಲೆ ಮಾಡಲಾಗಿತ್ತು. ಹತ್ಯೆಗೆ ಧರ್ಮಗಳ ಸಂಘರ್ಷವೇ ಕಾರಣ. ಅಲ್ಲೆಲ್ಲೋ ಒಬ್ಬ ಮುಸಲ್ಮಾನನ್ನು ಗೋ ಮಾಂಸದ  ವಿಚಾರವಾಗಿ ಹಿಂದೂಗಳು ಕೊಲೆಮಾಡಿದ್ದರು. ಎಷ್ಟು ಅಮಾನವೀಯ.! ಅವರನ್ನೇ ನಂಬಿರುಬಿವ ತಂದೆ-ತಾಯಿಯ ಗತಿ? ಹೆಂಡತಿ ಮಕ್ಕಳಿಗೆ ದಿಕ್ಕು? ನಾನು ನೀವು ಸಹಾಯ ಮಾಡಿರೆ? ಕಂಡಿತಾ ಇಲ್ಲ. 
ಕೆಲವೊಂದು ಸೂಕ್ಷ್ಮ ವಿಚಾರಗಳನ್ನು ಗಮನಿಸಿದಾಗ ಕೇರಳದಲ್ಲಿ ಸರಿ ಸುಮಾರು ೧೦೦ಕ್ಕೂ ಹೆಚ್ಚು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರನ್ನು ಇಲ್ಲವಾಗಿಸಲಾಗಿದೆ. ಕಾಶ್ಮೀರದಲ್ಲಿ ೫ ಲಕ್ಷಕ್ಕೂ ಹೆಚ್ಚು ಹಿಂದೂ ಪಂಡಿತರನ್ನು ಹೊರ ದೂಡಲಾಗಿದೆ. ಇನ್ನು ಪಶ್ಚಿಮ ಬಂಗಾಳ ಹೊತ್ತಿ ಉರಿದದ್ದು ಹಸಿರಾಗಿ ಇರುವಾಗಲೇ ಇಲ್ಲೇ , ನಮ್ಮ ನಾಡಲ್ಲೇ ಮತ್ತೊಂದು ಕೊಲೆ ಹೇಳ ಹೆಸರಿಲ್ಲದೆ ನೆಡೆದು ಹೋಗಿದೆ. ಕಳೆದ ಎರಡು ವರ್ಷದಲ್ಲಿ ೨೨ ಅಮಾಯಕ ಜೀವಗಳು ಇಹ ಲೋಕ ತ್ಯಜಿಸಿದ್ದಾರೆ. 


ನೆರೆಯ ಹೈದ್ರಾಬಾದ್ ಅಲ್ಲಿ ಓವೈಸಿ ಎಂಬ ಹೆಸಿರಿನ ವ್ಯಕ್ತಿ ಹಿಂದೂಗಳ ಮಾರಣಹೋಮ ನೆಡೆಸುವೆ ಎಂದು ಘಂಟಾಘೋಷವಾಗಿ ಜನ ಸಮೂಹದಲ್ಲಿ ಕೂಗಿ ಹೇಳಿದಾಗ ಬಿದ್ದ ಚಪ್ಪಾಳೆಗಳಿಗೂ, ಹೊಡೆದ ಶಿಳ್ಳೆಗಳಿಗೂ ಲೆಕ್ಕವಿಲ್ಲ. ಇದನ್ನು ಕೇಳಿದಾಕ್ಷಣ  ನಾವು ಭಾರತದಲ್ಲಿದ್ದೇವೋ ಅಥವಾ ಪಾಕಿಸ್ತಾನದಲ್ಲಿ ಇದ್ದೆವೋ ಅನ್ನೋ ಸಂದೇಶ ಬರದಿರದು. ತಿನ್ನೋದು ಇಲ್ಲಿ, ಮಕ್ಕಳನ್ನು ಓಡಿಸೋಕ್ಕೆ ಇಲ್ಲಿನ ದುಡ್ಡು ಆದರೆ..! 


ಅಲ್ಲಿ ಯಾವುದೋ ಮಹಿಳೆ ಯಾವ ನಾಚಿಕೆ ಇಲ್ಲವೆಂಬಂತೆ - ನಾವು ೧೨ ಮಕ್ಕಳಿಗೆ ಜನ್ಮ  ನೀಡುತ್ತೀವಿ, ನೀವು ಹಿಂದೂಗಳು ಒಂದಕ್ಕೊ ಎರಡಕ್ಕೋ ಸುಮ್ಮನಾಗತೀರಿ, ಪ್ರಧಾನಮಂತ್ರಿಗಳ್ಳನ ಹೊಡೆದು ಹಾಕ್ತಿವಿ ಅಂತ ಹೇಳೋ ಅಮ್ಮಂದಿರಿದ್ದರೇ ಮಕ್ಕಳು ಉಗ್ರಗಾಮಿಗಳಾಗದೆ ಇನ್ನೇನು ದೇಶ ಪ್ರೇಮಿಗಳಾಗಿರೆ? 


ಇನ್ನು ನಮ್ಮ ಶರತ್ ಮಡಿವಾಳನ ವಿಷಯಕ್ಕೆ ಬಂದಾಗ, ಆತ ಸತ್ತಿದ್ದು ಬೆಳಿಗ್ಗೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ಸ್ಪಷ್ಟವಾಗಿ ಹೇಳೆಲಾಗಿದೆ. ಆದರೆ ಸಾವಿನ ಸುದ್ದಿ ಬಹಿರಂಗವಾದದ್ದು ಅದೇ ರಾತ್ರಿ ೮:೩೦ಕ್ಕೆ? ಯಾಕೆ? ಕಾರಣ ಮಾನ್ಯ ಮುಖ್ಯ ಮಂತ್ರಿಗಳು ಬಂಟವಾಳದಲ್ಲಿ ಜನರನ್ನುದ್ದೇಶಿಸಿ ಭಾಷಣ ಮಾಡಬೇಕ್ಕಿತು. ಖಾದರ್ ಎಂಬ ಮಂತ್ರಿ ಆಸ್ಪತ್ರೆಗಳಿಗೆ ಕಟ್ಟು ನಿಟ್ಟಿನ ಅಪ್ಪಣೆ ಮಾಡಿ ಸಾವಿನ ಸುದ್ದಿ ಹೊರಹೋಗದಂತೆ ತಡೆದಿಟ್ಟಿದ್ದರು. ಅಲ್ಲಿ ಶರತನ ತಾಯಿ ಮಗ ಸತ್ತಿರುವ ವಿಷಯ ತಿಳಿಯದೆ ದೇವಸ್ಥಾನಗಳಿಗೆ ಮಗನ ಚೇತರಿಕೆಗೆ ಪೂಜೆ ಪುನಸ್ಕಾರಗಳನ್ನು ನೆಡಿಸುತ್ತಿದ್ದರು. ಎಂಥ ಹೃದಯ ಕಲಕುವ ಸ್ಥಿತಿ. ಮರಳು ಮಾಫಿಯಾ ಬಗ್ಗೆ ಮಾತಾಡಿದ್ದೆ ತಪ್ಪಾಗಿತ್ತು. ಅಮಾಯಕ ಜೀವವೊಂದು ಚಿರ ನಿದ್ರೆಗೆ ನೂಕಲ್ಪಟ್ಟಿತ್ತು. ಕುಟಪ್ಪ, ವಸಂತ್, ಪ್ರಶಾಂತ್ ಪೂಜಾರಿ, ರುದ್ರೇಶ್, ಪ್ರವೀಣ್, ವಾಸು, ಯೋಗೇಶ್, ಹರೀಶ್ ಇನ್ನು ಎಷ್ಟು ಮಂದಿ? 


ನಿಮ್ಮ ರಾಜಕೀಯ ಬೇಳೆ ಬೇಯುಸುವುದಕ್ಕೆ ಧರ್ಮಗಳ ನಡುವೆ ಬೆಂಕಿ ಹಚ್ಚಿ ಎಷ್ಟೋ ಜೀವಗಳ ಬಲಿ ಕೊಡುವುದು ಎಷ್ಟು ಸರಿ. ಕೊನೆಯ ಮಾತು -  ಪುತ್ರ ಶೋಕಂ ನಿರಂತರಂ ಅನ್ನೋ ಮಾತು ನಮ್ಮ ಮುಖ್ಯ ಮಂತ್ರಿಗಳಿಗೆ ನೆನಪ್ಪಾಗಲಿಲ್ಲವೇ? ಕಳೆದ ವರುಷ ತಮ್ಮ ಮಗ ತೀರಿಹೋದಾಗ ರಾಜ್ಯದ ಎಲ್ಲ ಜನ ಜಾತಿ-ಧರ್ಮ, ರಾಜಕೀಯ ಬೇಧ ಮರೆತು ನಿಮಗೆ ಸಾಂತ್ವನ ಹೇಳಿತ್ತು. ನಿಮಗೆ ಶರತ್ ಸಾವಿನ ನೋವು, ಈ ಕಣ್ಣ ಮುಚ್ಚಾಲೆ ಆಟ ಆಡುವಾಗ ಅವರ ತಂದೆಯ  ಪರಿಸ್ಥಿತಿ ನೆನಪ್ಪಾಗಲಿಲ್ಲವೇ? 


ನಿಮಗೆಲ್ಲ ದೇಶಕ್ಕಿಂತ ಧರ್ಮವೇ ಹೆಚ್ಚಾಯಿತೇ? ಒಂದು ಜೀವಕ್ಕಿಂತ ರಾಜಕೀಯ ಲಾಭವೇ ಹೆಚ್ಚಾಯಿತೇ ? ನಾವು ಷಂಡರಲ್ಲ ಎಂದು ಬೀಗುವ ಒಂದು ರಾಜಕೀಯ ಪಕ್ಷ ಮುಸಲ್ಮಾನ  ಸತ್ತಾಗ  ಯಾಕೆ ಅಳುವುದಿಲ್ಲ? ಮುಸಲ್ಮಾನ ಮನುಷ್ಯನಲ್ಲವೇ? ಇನ್ನು ಮುಸಲ್ಮಾನ್ನನ್ನು ಕೊಂದ ಹಿಂದುಗಳೇ - ನಿಮ್ಮ ಭಗವತ್ಗೀತೆ ಇದನ್ನೇ ಹೇಳಿಕೊಟ್ಟಿತ್ತೇ? ಪ್ರಪಂಚದಲ್ಲೆಡೆ ನೆಡೆಯುತ್ತಿರುವ ISIS ನ ಹೇಯ ಕೃತ್ಯ - ನಿಮ್ಮ ಮದರಸಾಗಳಲ್ಲಿ ಅಥವಾ ಕುರಾನ್ ಅಲ್ಲಿ ಇದನ್ನೇ ಹೇಳಲಾಗಿದೆಯೇ? ಇನ್ನು ಸಂವಿಧಾನದ ನಾಲ್ಕನೇ ಅಂಗವಾಗಿರೋ ನಮ್ಮ ವಾಹಿನಿಗಳು ಮೂರು ಕಾಸಿಗೆ ಬೇಡ. ಅದ್ಯಾರೋ ಕೋಮು ವಾದದ ಬಗ್ಗೆ ಟ್ವೀಟ್ ಮಾಡಿದನಂತೆ ಇವರು ಎರಡು ಗಂಟೆ ಕಾಲ ಬಿತ್ತರಿಸಿದರಂತೆ. 

ಎಷ್ಟೇ ಬೊಬ್ಬೆ ಹೊಡೆದರು ಅಷ್ಟೇ - ಈ ದೇಶದ್ ಗತಿ ಇಷ್ಟೇ ಕಣ್ಣಮ್ಮೋ, ಇಲ್ಲಿ ಚಿಂತೆ ಮಾಡಿ ಲಾಭ ಇಲ್ಲಮ್ಮೋ ಹಾಡು ಇವರ ನೋಡೇ ಬರೆದಿರಬೇಕು. ಇಂದು ಶರತ್ - ಮೊಹಮ್ಮದ್ . ನಾಳೆ ನಾನು ನೀವು. ಯೋಚಿಸಿ.! 

Comments