ಗೋಕಾಕ್ ವರದಿ ಬಗ್ಗೆ ನಿಮಗೆಷ್ಟು ತಿಳಿದಿದೆ?

ರಚನೆ - ತಿಲಕ್



ಕನ್ನಡ, ಕನ್ನಡ ತನ ನಮ್ಮಲ್ಲಿ ಮೊದಲಿನಿಂದಲೂ ಬೇರೂರಿದೆಯೇ? ಅಥವಾ ಸಾಮಾಜಿಕ ಜಲ ತಾಣಗಳು ಬಂದ ಮೇಲೆ ನಮ್ಮ ಭಾಷಾಭಿಮಾನಕ್ಕೆ ಬೆರಗು ನೀಡಿದೆಯೇ? ಗೋಕಾಕ್ ಚಳಿವಳಿ ಬಗ್ಗೆ ತಿಳಿಯಲು ಆಳಕ್ಕಿದಷ್ಟು ಇದರ ಗೊಂದಲ ಹೆಚ್ಚುತ್ತದೆ.



 ಅವೆಲ್ಲ ಇರಲಿ, ಅಸಲಿಗೆ ಗೋಕಾಕ್ ಚಳುವಳಿ ಎಂದರೇನು? ನನ್ನ ಮೊದಲ ವರಿದಿಯಲ್ಲಿ ರಾಜಕುಮಾರ ಭಾಗವಹಿಕೆ ಹಾಗು ಗೋಕಾಕ್ ಆಂದೋಲನದ ಉಲ್ಲೇಖ ಮಾಡಲಾಗಿತ್ತು. ಆದರೆ ಇಲ್ಲಿ ಇಂತಹ ಚಳುವಳಿ ಯಾಕೆ ಜರುಗಿತು ಎಂಬುದು ಹತ್ತರಲ್ಲಿ ಒಂಬತ್ತು ಮಂದಿಗೆ ಅರಿವಿಲ್ಲ. ಅದು ೮೦ರ ದಶಕದ ಮಾತು. ನಮ್ಮ ನೆರೆ ರಾಜ್ಯಗಳು ಭಾಷಾಂತರದ ಮೇಲೆ ವಿಂಗಡಣೆ ಆದಮೇಲೆ ಆಯಾ ರಾಜ್ಯಗಳಲ್ಲಿ ಆಯಾ ಭಾಷೆಗೆ ಮೊದಲ ಆದ್ಯತೆ ಹಾಗು ಪ್ರಥಮ ಭಾಷೆಯಾಗಿ ಘೋಷಿಸಲಾಗಿತು.

ಯಾವುದೇ ರಾಜ್ಯ, ದೇಶಗಳಿಗೆ  ತನ್ನ ಭಾಷೆಯ ಪ್ರಾಮುಖ್ಯತೆ ಗೊತ್ತಿರುತದೆ. ಆದರೆ ೨೦೦೦ ವರುಷ ಹಳೆಯದಾದ ಹಾಗು  ಸಮೃದ್ಧ ಸಾಹಿತ್ಯ, ಶಬ್ದಕೋಶ ಹೊಂದಿದ ಪ್ರಪಂಚದ ಕೆಲವೇ ಭಾಷೆಗಳಲ್ಲಿ ಒಂದಾದ ಕನ್ನಡಕ್ಕೆ ಅದರ ಸ್ಥಾನ ಮಾನ ಸಿಕ್ಕಿರಲಿಲ್ಲ.
ನಮ್ಮ ಸರಕಾರದ ತ್ರೀ ಭಾಷ ನೀತಿ ಒಲವು, ಶಾಲೆಗಳಲ್ಲಿ ಸಂಸ್ಕೃತದ ದರ್ಬಾರು, ಇಲ್ಲಿನ ಭಾಷಿಕರು ಆಂಗ್ಲ ಭಾಷ ಪ್ರೇಮ ಎಲ್ಲವೂ ಕನ್ನಡವನ್ನು ಮೂಲೆ ಮಾಡಿತ್ತು. ನಮ್ಮ ಕವಿಗಳು, ಪ್ರಾದ್ಯಾಪಕರುಗಳು, ವಿದ್ಯಾರ್ಥಿಗಳು, ಕನ್ನಡೇತರ ಸಂಘಗಳು ಒಕ್ಕಲಾಗಿ ಸರಕಾರದ ಮಲ ತಾಯಿ ದೊರೆಣೆ ವಿರುದ್ಧ ಧನಿಯೆತ್ತಿತು. ಈ ಪರಿಣಾಮ, ಹೋರಾಟಕ್ಕೆ ಮಣಿದ ಸರಕಾರ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ವಿ ಕೆ ಗೋಕಾಕ್ ಅವರ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸಿ ಇದರ ಆಳವಳಿಯಲು ಸೂಚಿಸಿತು.
ಅಂತೆಯೇ, ಗೋಕಾಕ್ ಅವರು ಪರಿಸ್ಥಿಯನ್ನು ಕೂಲಂಕುಷವಾಗಿ ಅಧ್ಯಯನ ಮಾಡಿ ಒಂದು ಸಂಕ್ಷಿಪ್ತ ವರದಿಯನ್ನು ಸರಕಾರಕ್ಕೆ ಮಂಡಿಸಿ  ಕನ್ನಡಕ್ಕೆ ಮೊದಲ ಆದ್ಯತೆ ನೀಡುವಂತೆ ಸೂಚಿಸಿತು.




 ಆದರೂ ಅಲ್ಲಿ ಇಲ್ಲಿ ಗೋಕಾಕ್ ವರದಿಯ ವಿರುದ್ದ ಬೇರೆ ಭಾಷಿಕರು, ಅಲ್ಪ ಸಂಖ್ಯಾತರು ಅಸಮಾಧಾನ ವ್ಯಕ್ತ ಪಡಿಸಿದಾದರೂ ಸರಕಾರ ವರದ್ದಿಯನ್ನು ಮಂಡಿಸುವ ಯಾವ ಸೂಚನೆಯನ್ನು ನೀಡಲಿಲ್ಲ. ಸರ್ಕಾರದ ಹಾಗು ಜನರ ನೀರಸ ಪ್ರತಿಕ್ರಿಯೆನ್ನು ಅರಿತ ಗೋಕಾಕ್ ಅವರು ಕನ್ನಡದ ಬಗ್ಗೆ ಹಾಗು ಪರಭಾಷಾ ಹೇರಿಕೆಯ ಪರಿಣಾಮ ತಿಳಿಸಲು ಸೂಕ್ತ ವ್ಯಕ್ತಿಯ ಹುಡುಕಾಟದಲ್ಲಿರುವಾಗಲೇ, ಪಾಟೀಲ್ ಪುಟ್ಟಪ್ಪನವರು ಕನ್ನಡಿಗರ ಆರಾಧ್ಯ ಧೈವರಾಗಿದ್ದ ಡಾ|| ರಾಜ್ ರನ್ನು ಚಳುವಳಿಯ ನೇತೃತ್ವ ವಹಿಸಲು ಕೇಳಿಕೊಂಡಾಗಿ, ದೊಡ್ಡವರು ಮರು ಮಾತಾಡದೆ ಒಮ್ಮತ ಸೂಚಿಸಿದರು.

ಡಾ|| ರಾಜ್ ಅವರ ಭಾಗವಹಿಕೆ ಇಡೀ ಚಿತ್ರಣವನ್ನು ಕ್ಷಣಾರ್ಧದಲ್ಲಿ ಬದಲಾವಣೆಯಾಯಿತು. ಎಲ್ಲೆಲ್ಲೂ ಜನ ಸಮೂಹ. ರಾಜ್ಯದ ಮೂಲೆ ಮೂಲೆಗಳಿಂದ ಜನಸಾಗರ ಹರಿದು ಬಂತು. ಪ್ರತಿಯೊಂದು ಭಾಷಣಗಳಲ್ಲಿ ಮಾತೃ ಭಾಷೆಯ ಪ್ರಾಮುಖ್ಯತೆ, ಶಾಲೆಗಳಲ್ಲಿ ಕನ್ನಡದ ಕಲಿಸದೇ ಇರುವ ಪರಿಣಾಮದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗಿತ್ತು.

ಅಂದಿನ ಮುಖ್ಯ ಮಂತ್ರಿ ಗುಂಡು ರಾವ್ ಅವರು ಚಳುವಳಿಯ  ಗಾಂಭೀರ್ಯ ಅರಿತು, ಗೋಕಾಕ್ ಅವರು ಮಂಡಿಸಿದ ಪ್ರಸ್ತಾವನೆಯನ್ನು ಪರಿಶೀಲಿಸಿ ಕನ್ನಡವನ್ನು ಅಧಿಕೃತವಾಗಿ ಭಾಷೆಯಾಗಿ ಘೋಷಿಸಿ ಹಾಗು ಕನ್ನಡಕ್ಕೆ ಸಿಗಬೇಕಿದ್ದ ಸ್ಥಾನ ಮಾನಗಳಗಳಿಗೆ ಆದ್ಯತೆ ನೀಡುವ ಭರವಸೆ ನೀಡಿತು. ವಿ ಕೆ ಗೋಕಾಕ್, ಪಾಟೀಲ್ ಪುಟ್ಟಪ್ಪ ಇನ್ನು ಅನೇಕ ಕನ್ನಡೇತರರ ಹೋರಾಟ, ರಾಜಕುಮಾರ ಅವರ ಭಾಗವಹಿಕೆ ಎಲ್ಲವೂ ಸಾರ್ಥಕವಾಗಿತ್ತು.

ಡಾ|| ರಾಜ್ ಮೇ ೬ ೧೯೮೨ ರಲ್ಲಿ ಬರೆದ ಭಾವ ಪೂರ್ಣ ಪಾತ್ರ -

ಪ್ರಕಟಣೆಯ ಕೃಪೆಗಾಗಿ

" ನನ್ನ ಹುಟ್ಟು ನಾಡಾದ ಕರ್ನಾಟಕ, ನನ್ನ ತಾಯ್ನುಡಿಯಾದ ಕನ್ನಡ, ಎರಡು ನನ್ನ ರಕ್ತದ ಭಾಗವಾಗಿದೆ. ನನ್ನ ಬದುಕನ್ನೇ ಅವುಗಳಿಗಾಗಲಿ ಮೀಸಲಿಟ್ಟು ಕಿಂಚಿತ್ ಕಾಲ ಸೇವೆಯನ್ನು ಮಾಡುತ್ತಿದ್ದೇನೆ. ಈಗ ಕರ್ನಾಟಕದಲ್ಲೇ ಕನ್ನಡಕ್ಕೆ ಕುತ್ತು ಬಂದಿರುವುದು ತುಂಬ ವಿಷಾಧಕರ. ಗೋಕಾಕ್ ವರದಿಯ ಬಗ್ಗೆ ಸರ್ಕಾರದ ವಿಳಂಬ ನೀತಿಯನ್ನು ವಿರೋಧಿಸಿ ಕನ್ನಡ ಜನರೇ ಚಳುವಳಿಗೆ ಇಳಿದಾಗ ಕನ್ನಡಿಗರ ಪ್ರೀತಿ ವಿಶ್ವಾಸಗಳನ್ನೇ  ಮನಸಾರೆ ಉಂಡಿರುವ ಣ್ಣನು ಬೆಂಗಳೂರಿಗೆ ಬಂದು ನನ್ನ ನಿಲುವನ್ನು ಸ್ಪಷ್ಟವಾಗಿ ಹೇಳಿದೆ. ಕಳೆದ ೧೯ನೆ ತಾರೀಖು ಕರ್ನಾಟಕ ಸರಕಾರ ಪ್ರಕಟಿಸಿದ ಭಾಷ ಸೂತ್ರವನ್ನು ಗಮನಿಸಿದ್ದೇನೆ. ಎಲ್ಲ ರೀತಿಯಿಂದಲೂ ಸಮರ್ಪಕವಾಗಿದ್ದ ಗೋಕಾಕ್ ಆಯೋಗದ ಶಿಫಾರಸನ್ನು ಕಡೆಗಣಿಸಿ, ಸರಕಾರವು ತನ್ನದೇ ಆದ ಸೂತ್ರವನ್ನು ಮುಂದಿಟ್ಟಿರುವುದು ನನಗೆ, ನನ್ನ ತರಹದ ನೂರಾರು ಕಲಾವಿದರಿಗೆ, ಸಾಹಿತಿಗಳಿಗೆ, ಕನ್ನಡ ಕುಲ ಕೋಟಿಗೆ ತೀವ್ರ ಅಸಮಾಧಾನವನ್ನು ಉಂಟುಮಾಡಿದೆ. ಗೋಕಾಕ್ ಆಯೋಗದ ಶಿಫಾರಸ್ಸನ್ನೇ ಜಾರಿಗೆ ತರಬೇಕೆಂದು ಸರಕಾರವನ್ನು ಒತ್ತಾಯ ಪಡಿಸಿ ನೆಡೆಯುತ್ತಿರುವ ಈಗಿನ ಕನ್ನಡ ಜನತೆಯ ಶಾಂತಿಯುತವಾದ ಚಳುವಳಿಗೆ ನನ್ನ ಅಖಂಡ ಬೆಂಬಲವಿದೆ. ಅಂದರೆ  ನನ್ನ ತಾಯ್ನಾಡು ಹ್ಹಗೂ ತಾಯ್ನಾಡಿನಿಂದ ಯಾವುದೇ ಕರೆ ಬಂದರು ಇವತ್ತಿನ ನನ್ನೆಲ್ಲ ಶಕ್ತಿಯನ್ನು ತಾಯಿಗಾಗಿ ಮುಡುಪಾಗಿಡಿಸಲು ಬದ್ಧನಾಗಿದ್ದೇನೆ"

- ರಾಜಕುಮಾರ  

ಮಾಹಿತಿ ಹಾಗು ಚಿತ್ರ ಸೆಲೆ - ಗೂಗಲ್
ಟ್ವಿಟ್ಟರ್ - @Cricket_Lama 

Comments

Post a Comment