ಬಲವಂತದ ಹಿಂದಿ ಹೇರಿಕೆ ಬೇಡ - Stop Hindi Imposition


ಈ ಉತ್ತರ ಭಾರತದ ಮೇಧಾವಿ ರಾಜಕಾರಣಿಗಳಿಗೆ ದ್ರಾವಿಡ ನಾಡಿನ ಜನತೆಯ ಭಾಷ ಪ್ರೇಮದ ಅರಿವೇ ಇಲ್ಲ. ಮೊನ್ನೆ ಎಲ್ಲ ಪ್ರಾದೇಶಿಕ ಪರೀಕ್ಷೆಗಳನ್ನ ಕನ್ನಡ ಹಾಗು ಇಂಗ್ಲಿಷ್ನಲ್ಲಿ ಮಾಡ್ತಿವಿ  ಅಂತ ಬೊಗಳೆ ಬಿಟ್ಟು ಇನ್ನು ಒಂದು ತಿಂಗಳು ಕಳೆದಿಲ್ಲ ಆಗಲೇ ಕನ್ನಡಿಗರ ಮನವಿಯನ್ನು ಕಾಲ ಕಸದಂತೆ ಹೊಸಕಿಯಾಕಿದ್ದಾರೆ. ಇನ್ನು ಇಲ್ಲಿನ ನಮ್ಮ ಮಂತ್ರಿಗಳು ಅದೇ ಸರಿ ಎಂದು ಪಕ್ಷ ನಿಷ್ಠೆ ಮೆರೆದಿದ್ದಾರೆ. ನೆನಪಿಡಿ ನೀವು ಮೊದಲು ಕನ್ನಡಿಗರು ಆಮೇಲೆ ಆ ಪಕ್ಷದ ಕಾರ್ಯಕರ್ತರು.



ಪ್ರಹಲಾದ್ ಜೋಶಿ ಅಂತ ಹಿರಿಯ ರಾಜಕರಣಿ ಈ ವಿಚಾರವನ್ನು ಇನ್ನು ನಮ್ಮ ಕೇಂದ್ರ ಹಣಕಾಸು ಮಂತ್ರಿಯವರೊಡನೆ  ಸಮಾಲೋಚನೆ ನೆಡೆಸ್ತಾರಂತೆ, ನಿಮ್ಮ ಮುಖಕ್ಕೆ! ಅಲ್ಲಿ ವರೆಗೂ ಇದೆ ಕೆಲಸಕ್ಕಾಗಿ ಕಾಯುತ್ತ ಕುಳಿತ ನಮ್ಮ ವಿದ್ಯಾವಂತರ ಗತಿ? ನಮ್ಮ ಗ್ರಾಮೀಣ ಪ್ರತಿಭೆಗಳ ಆಸೆ ಯನ್ನು ತುಂಬಿಯೂ ಹರಿಯುತಿಹ ನದಿಗಳಲ್ಲಿ ಹೋಮ ಮಾಡಬೇಕೆ? How will you justify this? ನೀವೇನ್ ಸ್ವಾಮಿ easy lounge ಅಲ್ಲಿ ಕಾಲ ಕಳೆಯುತ್ತಾ, ಸರ್ಕಾರೀ ಕಾರು ಹಾಗು ಬಂಗಲೆಯಲ್ಲೇ ಇರುತ ನೆಮ್ಮದಿ ಜೀವನ ನೆಡೆಸುತ್ತಿದ್ದೀರಿ ಆದ್ರೆ ನಮ್ಮ ಹೈಕ್ಳ ಕಥೆ ಕೇಳೋರ್ಯಾರು. ಇಲ್ಲಿ ಕೇವಲ ಬಿಜೆಪಿ ಯನ್ನು ದೂರುವುದು ಸರಿಯಲ್ಲ, ನಮ್ಮ ಪ್ರಾದೇಶಿಕ ಪಕ್ಷಗಳು, ಕಾಂಗ್ರೆಸ್ ಎಲ್ಲರೂ ಮಾಡಿದ್ದು ಇದನ್ನೇ. ಅವರವರ ಬೇಳೆ ಬೇಯಿಸಿಕೊಂಡರಷ್ಟೇ. ಅನ್ಯಾಯ ಆಗಿದ್ದು ನಮ್ಮ ಜನತೆಗೆ. ಇಷ್ಟು ದಿನದವರೆಗೂ  ಸರೋಜಿನಿ ಮಹಿಷಿ ವರದಿ ಬಗ್ಗೆ ಗೊತ್ತಿರಲಿಲ್ಲವೇ? ಅವರ ಅಧಿಕಾರವಿದ್ದಾಗ ಏನು ಕಿಸಿಯದೆ ಈಗ ಬೇರೊಂದು ಪಕ್ಷದ ಮೇಲೆ ಇವರ ಪ್ರಹಾರ. 

ಇನ್ನು IBPS ಸುದ್ದಿ ಬೇಯುತ್ತಿರುವಾಗಲೇ ನಮ್ಮ ಮಾನ್ಯ ಘನ ಗೃಹ ಮಂತ್ರಿಗಳಾದ ಶ್ರೀ ಅಮಿತ್ ಷಾರವರು ಹಿಂದಿ ಭಾಷೆ ದೇಶವನ್ನು ಒಗ್ಗೂಡಿಸುತ್ತದೆ ಎಂದು ಬಾಯಿಗೆ ಬಂದ ಹಾಗೆ ಹರಡುತ್ತಿದ್ದಾರೆ. ದ್ರಾವಿಡ ನಾಡಿನ ಭಾಷೆಗಳಲ್ಲಿ ಕಾವ್ಯ, ರಗಳೆ, ಗ್ರಂಥಗಳು ರಚನೆಯಾದಮೇಲೆ ನಿಮ್ಮ ಈ ಹಿಂದಿ ಇನ್ನು ಕಣ್ಣು ಸಹ ಬಿಟ್ಟಿರಲಿಲ್ಲ, ನಮ್ಮ ಭಾಷೆಗಳಿಗೆ ೨೦೦೦ ಸಾವಿರ ವರುಷಗಳ ಇತಿಹಾಸವಿದೆ. ನಿಮ್ಮ ಈ ಹಿಂದಿಯನ್ನು ನಿಮ್ಮಲ್ಲೇ ಇರಲಿ ನಮ್ಮ ಮೇಲೆ ದಬ್ಬಾಳಿಕೆಯ ಹೇರಿಕೆ ಬೇಡ. 

ಒಬ್ಬ ಬಿಜೆಪಿಯ ಲೋಕಸಭಾ ಅಥವಾ ರಾಜ್ಯಸಭಾ ಮಂತ್ರಿ ಅಮಿತ್ ಷಾ ಅವರ Nazi ತಂತ್ರಕ್ಕೆ ತುಟಿಕ್ ಪಿಟಿಕ್ ಅನ್ನೋ ಧೈರ್ಯವಿದೆಯೇ? ಮೊದಲೇ ಹೇಳಿದ ಹಾಗೆ  ನೆನಪಿಡಿ ನೀವು ಮೊದಲು ಕನ್ನಡಿಗರು ಆಮೇಲೆ ಆ ಪಕ್ಷದ ಕಾರ್ಯಕರ್ತರು.

ಇನ್ನು ನಮ್ಮ ಕರ್ನಾಟಕದ ಸುದ್ದಿಗೆ ಬಂದರೆ, ಅದು ಇನ್ನು ದರಿದ್ರವಾಗಿದೆ. ಬೆಂಗಳೂರಂತೂ ಕೇಳೋದೇ ಬೇಡ. ಒಬ್ಬ ಹಿಂದಿವಾಲಾ ಟೈಮ್ ಕಿತ್ನ ಭಾಯ್ ಅಂದ್ರೆ ನಮ್ಮ ಕನ್ನಡಿಗರು ತೀನ್ ಬಜೆ ಹೊಗೆಯ ಭಾಯಿ ಅಂತಾರೆ ಅದೇ ನೀನು ತಮಿಳು ನಾಡಿಗೋ, ಕೇರಳಕ್ಕೋ ಹೋಗಿ ಅದೇ ಪ್ರಶ್ನೆ ಕೇಳಿದ್ರೆ ಅವರು ತಮ್ಮ ತಮ್ಮ ಭಾಷೆಗಳಲ್ಲೇ ಉತ್ತರ ನೀಡುತ್ತಾರೆ, ಅದು ಭಾಷ ಪ್ರೇಮ ಅಂದ್ರೆ. 

ನಾನಿಲ್ಲಿ ನಿಷ್ಠುರವಾಗೇ ಹೇಳ್ತಿದ್ದೀನಿ ಮತ್ತು ಅದೇ ನಿಜ ಸಹ, ನಮಗೆ ಭಾಷೆ ಪ್ರೇಮ ಕಡಿಮೇನೆ. ನಮ್ಮಲಿ ಒಗ್ಗಟ್ಟು ಇಲ್ಲ, ಬರಿ ಕಿತ್ತಾಟ, ಅವನ್ನ ಇವ್ನು ಬಯೋದು, ಇವನ್ನ ಅವನು ಬಯೋದು. 

ನಮ್ಮ ಡಿ ಬಾಸ್, ನಮ್ಮ ಕಿಚ್ಚ ಬಾಸ್, ಯಶ್ ಬಾಸ್, ಅಪ್ಪು ಬಾಸ್ ಎಲ್ಲ ಮರೆತು ಸ್ವಲ್ಪ ನಮ್ಮ ಕನ್ನಡ ತಾಯಿಯ ಮಾನ ಉಳಿಸಿ, ನಿಮ್ಮ ಹಾಗು ನಮ್ಮ ಈ ತಾರಾ ಪ್ರೇಮ  ಯಾವುದಕ್ಕೂ ಪ್ರಯೋಜನ ಬರೋಲ್ಲ, ಅದು ಒಬ್ಬ ವ್ಯಕ್ತಿ ಹಾಗು ಅವನ ಕೆಲಸಕ್ಕೆ ನೀವು ಕೊಡುವ ಪ್ರೀತಿಯಷ್ಟೇ. ನೀವ್ ನೀವೇ ವಾಕ್ ಪ್ರವಾಹ ಮಾಡೋ ಬದಲು ನಾವೆಲ್ಲಾ ಒಂದು ಅನ್ನು uniformity ಬೆಳೆಸಿಕೊಳ್ಳಿ ಆಗ ಯಾವ ಹಿಂದಿವಾಲಾನೂ ಬಂದು ಇಲ್ಲಿ ಹಿಂದಿ ಇದ್ದರೆ ಐಕ್ಯತೆ ಇರುತ್ತೆ, ಅದಿರುತ್ತೆ, ಇರುತ್ತೆ ಅಂತ ಚಕಾರ ತೆಗಿಯೋಲ್ಲ. ನಮ್ಮ ವಾರ್ತ ವಾಹಿನಿಗಳಿಗೆ DK SHIVAKUMARದು ಮುಗ್ದಿಲ್ಲ ಅನ್ಸುತ್ತೆ

ಕುವೆಂಪು ಅವರು ಹೇಳಿದ ಮಾತು ನೆನಪಿರಲಿ - 
"Nehru is not greater than Kannada. Let him learn Kannada or get his speeches translated"

 ರಚನೆ - ತಿಲಕ್ ರಾಮಮೂರ್ತಿ

Comments