Independence Day - #73

ನಮ್ಮ ಮಕ್ಕಳಿಗೆ ಅಥವಾ so called ಬುದ್ದಿ ಜೀವಿಗಳಿಗೆ ನಮ್ಮ ದೇಶದ ಬಗ್ಗೆ ಎನ್ನಾದ್ರೂ ಹೇಳ್ರ್ಯ್ಯ ಅಂದ್ರೆ ಒಂದು ಗಂಟೆ ಭಾಷಣ ಮಾಡುತ್ತಾರೆ
ಯಾವ ದೇಶದಲ್ಲಿ ರಾಜಕೀಯನು ಸರಿ ಇಲ್ಲ, ಚರಂಡೀನು ಸರಿ ಇಲ್ಲ - ಅದು ಭಾರತ, ಯಾಕೆಂದ್ರೆ ಎರಡು ಒಂದೇ ಅಂತ
ಯಾವ ದೇಶದಲ್ಲಿ electricity ಸರಿ ಇಲ್ಲ್ವೋ - ಅದು ಭಾರತ, ನಮ್ಮ್ ಕರ್ನಾಟಕ ನೋಡಿದಾಗಲತಂತು ಹೌದು ಅನ್ಸುತ್ತೆ
ಯಾವ ದೇಶದಲ್ಲಿ ನೆಲ್ಲಿ ಬಿಟ್ಟರೆ ನೀರಿಗಿಂತ ಹೆಚ್ಚು ಗಾಳಿ ಬರುತ್ಹೋ ಅದು ಭಾರತಹೀಗೆ ಊರಗಲ ಭಾಷಣ ಮಾಡೋ ನಮ್ಮವರಿಗೆ ಒಳ್ಳೇದ್ ಹೇಳ್ರಯ್ಯ ಅಂದ್ರೆ ನಮ ದೇಶದ್ಲಲಿ ಏನಿದೆ ಅಂತಾರೆ. ನಮಗೂ ನಿಮಗೂ ಈ ತಾಯಿಯ ಲಾವಣ್ಯದ ಬಗ್ಗೆ ಎಷ್ಟು ಗೊತ್ಹೋ ವಿದೇಶಿಯರಿಗೆ ಅದಕ್ಕಿಂತ ಹೆಚ್ಚ್ಚು ಗೊತ್ಹು.Hu Shih ಅನ್ನೋ ಒಬ್ಬ ಚೀನಾ ತತ್ವಜ್ಞಾನಿ ಹೇಳ್ತಾರೆ - ಭಾರತ ಅಂತ ಒಂದು ದೇಶ ಇದೆ, ಹತ್ತು ಸಾವಿರ ವರ್ಷಗಳ ಕಾಲ ಚೀನಾ ಮೇಲೆ ಆಳ್ವಿಕೆ ಮಾಡಿದೆ, ಯಾವುದೇ  ಒಬ್ಬೇ ಒಬ್ಬ ಸೈನಿಕನ್ನು ಕಳುಹಿಸದೆ ತನ್ನ ಪ್ರಬುದ್ಧತೆಯನ್ನು ಮೆರೆದಿದೆ. ಹೇಗೆ? ಗೌತಮ ಬುದ್ಧನ ಅನುಯಾಯಿಗಳು ಬಂದರು ಚೀನಾವನ್ನು conquer ಮಾಡಿಕೊಂಡರು.ನಮ್ಮ ದೇಶದಲ್ಲಿ ಬಂಗಾರದ ಕೊಳ್ಳುವಿಕೆ ಎಷ್ಟಿದೆ ಎಂದರೆ ನಾವು  1/4th ಜಗತ್ತನ್ನು   ಕೊಂಡು ಕೊಳ್ಳುವಷ್ಟು  ಬಂಗಾರ ನಮ್ಮಲ್ಲಿದೆ, ಒಂದು ಐದಾರು ವರ್ಷಗಳ ಹಿಂದೆ recession ಬಂದಾಗ IMF ೪೦೦ ಟನ್ ಬಂಗಾರವನ್ನು ಮಾರಟಕ್ಕಿಟ್ಟರು, ಅದರಲ್ಲಿ ೨೦೦ ಟನ್ ಕೊಂಡಿಕೊಡದ್ದು ನನ್ನ ಭಾರತ, ಆದ್ರೆ ನಾವು ನಮ್ಮ ದೇಶವನ್ನ ದರಿದ್ರ ದೇಶ ಅಂತೀವಿ.ಪ್ರಪಂಚದಲ್ಲಿ cryogenic engine ಬಳಸಿ 8 ಉಪಗ್ರಹವನ್ನು ಕಕ್ಷೆಗೆ ಕೂರಿಸಬಲ್ಲ ಪ್ರಪಂಚದ ೫ ದೇಶಗಳಲ್ಲಿ ಭಾರತವು ಒಂದು. ಅತಿ ಹೆಚ್ಚು engineers ಹಾಗು doctors ಅನ್ನು ಎಕ್ಸ್ಪೋರ್ಟ್ ಮಾಡೋ ದೇಶ ನನ್ನ ದೇಶ. ಇನ್ನು ಎಷ್ಟು ಹೇಳಬೇಕು ನಮ ದೇಶದ ಬಗ್ಗೆ.ನಾವು ಪ್ರಪಂಚಕ್ಕೆ ಒಸಾಮಾ ಅಂತ ಒಬ್ಬೇ ಒಬ್ಬ ಮಾಫಿಯಾ ಡಾನ್ ಅನ್ನು ಎಕ್ಸ್ಪೋರ್ಟ್ ಮಾಡಿಲ್ಲ, ನಾವು ಜಗತ್ತಿಗೆ ಕೊಟ್ಟಿರೋದು ಸಂತ ರಾಮ ತೀರ್ಥ, ಯೋಗಿ ಅರವಿಂದ, ವಿವೇಕಾನಂದ, ರಾಮಕೃಷ್ಣ, ಮಾತಾ ಅಮೃತ ಮಯಿ ಅಂಥವರನ್ನ ಇಷ್ಟಾದ್ರೂ ನಾವು ಬಡ ರಾಷ್ಟ್ರದವರು. ನಾವು ಇಡೀ ವಿಶ್ವಕ್ಕೆ ಜ್ಞಾನದ ಮೂಲಕ ಬೆಳಕು ನೀಡಿದ್ದೇವೆ.ನಮ್ಮ ದೇಶದ ಮೇಲೆ ಅಫ್ಘಾನ್ ಬಂದ್ರು, ತುರುಕರು ಬಂದ್ರು, ಮೊಘುಲ್ರು, ಗ್ರೀಕರು, ಶಕರು,  ಪೋರ್ಚುಗೀಸರು, ದುಚ್ಚರೂ, ಆಂಗ್ಲರು, ೪ ಬಾರಿ ಪಾಕಿಸ್ತಾನ, ಚೀನಾ ೨ ಬಾರಿ ಮತ್ತೆ ಮೂರನೇ ಬಾರಿಗೆ ದಾಳಿ ಮಾಡಲು ಕಾದು ಕುಂತಿದೆ. ಪ್ರಪಂಚ ದಲ್ಲಿ ಎಲ್ಲೂ SLUM ಅಲ್ಲಿ ಕಳ್ಳತನ ಆಗಿದೆ ಅಂತ ನಾವು ಓದಿಲ್ಲ ಆದ್ರೆ ಆಗಿರೋದೆಲ್ಲ ಶ್ರೀಮಂತರ ಮನೆಗಳಲ್ಲಿ. ವಿಶ್ವದ ಇಂಥ ದೊಡ್ಡ ದೊಡ್ಡ ಡಕಾಯಿತರೆಲ್ಲ ಕೊಳ್ಳೆ ಹೊಡೆದಿದ್ದು ನನ್ನ ಶ್ರೀಮಂತ ಭಾರತವನ್ನ.ಭಾರತ ಶ್ರೀಮಂತವಾಗಿದೆ ಆದ್ರೆ ನಮ್ಮ ಮನಸ್ಸುಗಳು ಬಡವಾಗಿದೆ. ೭೨ ವರುಷಗಳ ದೀರ್ಘ ನಿದ್ರೆ ಮಾಡಿದ್ದೀವಿ, ಈಗಲಾದರೂ ಮೇಲೆ ಏಳೋಣ. ದೇಶವನ್ನು ಪ್ರೀತಿಸೋಣ. ಸ್ವಾರ್ಥಕ್ಕೆ, ರಾಜಕೀಯ ಲಾಭಕ್ಕೆ, ಹಣದಾಸೆಗೆ ತಾಯಿ ಸೆರಗನ್ನು ಎಳೆಯದಿರಿ.  ಮನೆ ಮನಗಳಲ್ಲಿ ಒಂದೇ ಮಾತರಂ ಮೊಳಗಲಿ, ಮಕ್ಕಳ ಜೋಗುಳದಲ್ಲಿ ಒಂದೇ ಮಾತರಂ ಮೊಳಗಲಿ, ಹರಿಯುವ ಜುಳು ಜುಳು ನೀರಿನಲ್ಲಿಯೂ  ಒಂದೇ ಮಾತರಂ ಮೊಳಗಲಿ, ಸೈನಿಕರ ಬಂದೂಕಿನಲ್ಲಿ, ಮಳೆ ಹನಿಯಲ್ಲಿ, ಕನಸ್ಸಿನಲ್ಲಿ  ಒಂದೇ ಮಾತರಂ ಮೊಳಗಲಿ.ವೀರ ಹೆಂಜ ನಾಯಕ, ಚಾಫೆಕರ್ ಸಹೋದರರ ನೆನೆಯುತ, ಭಗತ್- ಬೋಸ್- ಸಾವರ್ಕರ್ ಅವರನ್ನು ಸ್ಮರಿಸುತ್ತ, ರಾಮಕೃಷ್ಣ-ವಿವೇಕಾನಂದರನ್ನು ಜಪಿಸುತ, ಕ್ಯಾಪ್ಟನ್ ವೋಲಿನ್, ವಿಕ್ರಂ ಬಾತ್ರಾ, ಮೇಜರ್ ಮನೋಜ್ ಕುಮಾರ್ ಪಾಂಡೆ, ಸಂದೀಪ್ ಉನ್ನಿ ಕೃಷ್ಣನ್  ತುಕಾರಾಂ ಓಂಲೇ, ಕರ್ಕರೆ, ರಾಜೇಶ್ ಆಧಿಕಾರಿ ಇನ್ನು ಅನೇಕ ವೀರ ಯೋಧರ ತ್ಯಾಗ ಬಲಿದಾನಕ್ಕೆ ಕಣ್ಣೀರಿಡುತ್ತ, ಸಂಗೊಳ್ಳಿ ರಾಯಣ್ಣರಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸುತ್ತಾ -ಸಮುದ್ರ ವಸನೇ  ದೇವಿ  ಪರ್ವತ ಸ್ತನ ಮಂಡಲೇ |
ವಿಷ್ಣು ಪತ್ನಿ  ನಮಸ್ ತುಭ್ಯಮ್  ಪಾದ ಸ್ಪರ್ಶಮ್  ಕ್ಶಸಮಸ್ವ ಮೇ
ಶ್ಲೋಕ ಜಪಿಸುತ ತಾಯಿಗೆ ವಂದನೆ.ಸೆಲೆ - Chakaravathy, Google, Wiki

Comments