Homo sapiens have some intuition please. ಕೇರಳ ಕೊಡಗು ಪ್ರವಾಹ.
ಯಾವುದೇ ಅತಿವೃಷ್ಠಿ ಅಥವಾ ಅನಾವೃಷ್ಟಿ ಆದರೂ ನಮ್ಮ ಸಹಾಯಕ್ಕೆ ಬರುವವರು ನಮ್ಮ ಸೈನಿಕರು. ಇದು ಸೂರ್ಯ ಭೂಮಿಯನ್ನು ಬೆಳಗುವಷ್ಟೇ ಸತ್ಯ. ಹೀಗೆ ಮೊನ್ನೆ ಮೊನ್ನೆ ನಾನು Whats app ನೋಡುತ್ತಿದ್ದಾಗ ಗೆಳೆಯನೊಬ್ಬ ಕೇರಳ ಪ್ರವಾಹದ ಕುರಿತು ಒಂದು ದೊಡ್ಡ ಅಂಕಣ ಕಳುಹಿಸಿದ್ದ. ಅದರ ವಿಷಯ ಏನೆಂದರೆ - ಕೇರಳ ಅತಿವೃಷ್ಠಿಗೆ ಕಾರಣ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಹೆಣ್ಣು ಮಕ್ಕಳ ಪ್ರವೇಶ ಕೊಡಬೇಕೆಂದು ನಮ್ಮ ಉಚ್ಚ ನ್ಯಾಯಾಲಯ ಆಜ್ಞೆ ಹೊರಡಿಸುದ್ದು ಎಂದು.
What is wrong with these Homo sapiens ? ನಮಗೆ ನಮ್ಮ ಧರ್ಮದ ಬಗ್ಗೆ ಕಾಳಜಿ ಇರುವುದು ಒಳಿತೇ ಆದರೆ ಅಂಧಕಾರದಿಂದ ಹೊರಬಂದು ನೆರವಿನ ಹಸ್ತ ಚಾಚುವ ಬದಲು, luxury lounge ಅಲ್ಲಿ ಬಿಯರ್ ಕುಡಿಯುತಾ ಯಾರೋ ಕಳುಹಿಸಿದ ವಿಷಯವನ್ನು ಹಿಂದೂ ಮುಂದು, ತೂಕ ಮಾಡದೆ ನಂಬಿ ಬೇರೆಯವರನ್ನು ತಮತ್ತ ಸೆಳೆಯುವವರಿಗೆ ಏನು ಹೇಳೋದು?
ಹಾಗಾದಲ್ಲಿ ನಮ್ಮ ಅಯ್ಯಪ್ಪ ಅಷ್ಟು ಕೆಟ್ಟವನೇ? ಹಾಗಾದಲ್ಲಿ ತೀರ್ಪು ಕೊಟ್ಟ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರ, ಭಾನುಮತಿ ಹಾಗು ಅಶೋಕ್ ಭೂಷಣ್ ಅವರಿಗೆ ಯಾಕೆ ಏನು ಆಗಿಲ್ಲ? ಇನ್ನು ನಮ್ಮದೇ ಕೊಡಗು ಅಕ್ಷರ ಸಹ ನರಕವಾಗಿದೆ, ಅಲ್ಲೂ ಶಬರಿಮಲೆ ತೀರ್ಪು ಪ್ರಭಾವ ಬೀರಿದೆಯೇ? Non-sense .
ಇನ್ನು ನಮ್ಮ ಮುಖ್ಯ ಮಂತ್ರಿಗಳು ವೈಮಾನಿಕ ವೀಕ್ಷಣೆ ವೇಳೆ news paper ನೋಡುತ್ತಿದ್ದರೆಂದು ಬೊಬ್ಬೆ ಹೊಡೆಯುತ್ತಿರುವವರು ನಿಮಗೆ ಏನು ಹೇಳುವ ಅವಶ್ಯಕತೆಯೇ ಇಲ್ಲ. Have some intuition for god damn sake .ಮತೊಬ್ಬ, UAE ಸರಕಾರ ಕೇರಳಕ್ಕೆ ೭೦೦ ಕೋಟಿ ದೇಣಿಗೆ ನೀಡಿದೆ ಆದರೆ ನಮ್ಮದೇ BJP ಸರಕಾರ ಕೇವಲ ೬೦೦ ಕೋಟಿ ದೇಣಿಗೆ ನೀಡಿದೆ ಎಂದು ಸಾಮಾಜಿಕ ಜಾಲತಾಣಗಲ್ಲಿ hatred ಹರಡುತ್ತಿದ್ದಾನೆ, ಆದರೆ ಕಳೆದ ಎರಡು ದಿನದಿಂದ ಕೇರಳ ಒಂದಕ್ಕೆ ೫ ಲಕ್ಷ ಕೆಜಿ ಅಷ್ಟು ಆಹಾರ ಸರಬರಾಜು ಮಾಡಲಾಗಿದೆ ಎಂದು ಎಲ್ಲೂ ಹೇಳಿಲ್ಲ. ಯಾಕೆ?
ನಮ್ಮದು 137 ಕೋಟಿ ಜನಸಂಖ್ಯೆ, ನೆನಪಿರಲಿ.
ಅಲ್ಲೆಲ್ಲೋ ವಾಯು ಪಡೆಯ chopper ಅನ್ನು ಕೆಂಪು ಬಟ್ಟೆ ತೋರಿಸಿ, ತನ್ನತ್ತ ಸೆಳೆದು, selfie ತೊಗೊಂಡು ವಾಪಸ ಕಳುಹಿಸಿದನಂತೆ. ಮತೊಬ್ಬ ಜಾಲಿ ರೈಡ್ ಹೋಗೋಕೆ ವಾಯುಪಡೆಯ ವಾಹನ ಉಪಯೋಗಿಸಿದನಂತೆ. ಇವರಿಗೆಲ್ಲ ಬುದ್ದಿ ಬರೋದು ಯಾವಾಗ? ಬರದೇ ಇದ್ದರೂ ಆಶರ್ಯವೇನಿಲ್ಲ.
ನಮ್ಮ ಸೈನಿಕರು ಪ್ರಾಣದ ಹಂಗು ತೊರೆದು ಅಲ್ಲಿ ಪ್ರಾಣ ರಕ್ಷಣೆ ಮಾಡುತ್ತಿದ್ದರೆ, ನಾವು ಇಲ್ಲಿ ಸರಕಾರ ಅದು ಮಾಡಿಲ್ಲ, ಇದು ಮಾಡಿಲ್ಲ, ದೇವ್ರು ಪಾಠ ಕಲಿಸ್ತು, ಮಣ್ಣು ಮಸಿ ಅಂತ ಇದ್ದಿವಿ.
ಚಿತ್ರ ಸೆಲೆ - ಗೂಗಲ್




Comments
Post a Comment