Cambridge Analytica ಹಾಗು ರಾಷ್ಟ್ರ ರಾಜಕಾರಣ

ರಚನೆ - ತಿಲಕ್

ಈ ಅಂಕಣ ನನ್ನ genre ಅಲ್ಲದೆ ಇದ್ದರು ಯಾಕೋ ಏನೋ ಸ್ವಲ್ಪ research ಮಾಡಬೇಕಿನಿಸಿತು. ಅದೆಲ್ಲ ಎಲ್ಲೊ ಒಂದು ವಿಡಿಯೋ ನೋಡಿ ನಮಗೂ ನಮ್ಮ ರಾಜಕಾರಣಕ್ಕೂ, facebook  ಎಂಬ ಸಾಮಾಜಿಕ ಜಾಲತಾಣ, Cambridge Analytica ಹಾಗು ಆಶ್ಚರ್ಯ ರೀತಿಯಾಗಿ ವೀರಶೈವ ಲಿಂಗಾಯತಕ್ಕೂ ಸಂಬಂಧ ಇದ್ದದ್ದು ಕೇಳಿ ಒಮ್ಮೆಲೇ ನನ್ನ ಮನ ಠಸ್ ಎಂದಿತು.
ನೇರವಾಗಿ ವಿಷಯಕ್ಕೆ ಬರೋಣ -
Strategic Communication Laboratories ಎಂಬ ಸಂಸ್ಥೆಯು facebook ನೊಂದಿಗೆ ಒಂದು ಒಪ್ಪಂದಕೆ ಬರುತ್ತದೆ, ಅದೇನಂದರೆ facebook ಬಳಕೆದಾರರಿಗೆ ಒಂದು application download ಮಾಡಿಕೊಳ್ಳಲು ಹೇಳಿ, ಅದರಲ್ಲಿ ಕೇಳುವ ಕೆಲವು ಸುಲಭ ಪ್ರಶ್ನೆಗಳಿಗೆ ಉತ್ತರಿಸಿದರೆ ನಿಮ್ಮ ಖಾತೆಗೆ ತಲಾ ಒಂದು ಡಾಲರ್ ಕೊಡುವುದಾಗಿ ಹೇಳಿದ.
ಲಕ್ಷಾಂತರ ಮಂದಿ SCL ಗೆ ಡೇಟಾ ಕೊಡುವ ನೆಪದಲ್ಲಿ, ಒಂದು ಡಾಲರ್ ಆಸೆಗೆ ಅವರವರ ಅಕೌಂಟ್ನ password ಗೊತ್ತಿಲ್ಲದಂತೆ ಕೊಟ್ಟಾಗಿತ್ತು. ಈ SCL  ಸಂಸ್ಥೆ ಅವರ (LIKES) ಹಾಗು ಅವರ ಸ್ನೇಹಿತರ ಅಕೌಂಟಿಗೂ ಲಗ್ಗೆ ಇಟ್ಟು, ಅಮೇರಿಕಾ ಹಾಗು ಯೂರೋಪ್ ಒಂದರಲ್ಲೇ ೫ ಕೋಟಿಗೂ ಹೆಚ್ಚು ಜನರ ಡೇಟಾ ಅವರ ಕೈಗೆ ಸೇರಿತ್ತು.

ಈ SCL ಹೀಗೆ ಮುಂದುವರೆಯುತ್ತ ಮತ್ತ್ತೊಂದು ಸಂಸ್ಥೆಯನ್ನು ಹುಟ್ಟು ಹಾಕಿತು -  ಅದುವೇ Cambridge Analytica .
 Cambridge Analytica ಸಂಸ್ಥೆಯ ಮುಖ್ಯಸ್ಥ Nicks 2016 ರಲ್ಲಿ ನಮಗೆ ಅಮೆರಿಕಾದ ಪ್ರತಿಯೊಬ್ಬರ ವ್ಯಕ್ತಿಯ ವ್ಯಕ್ತಿತ್ವ ಏನು ಅಂತ ಹೇಳುವಂತಹ ಡೇಟಾ ಇದೆ ಅಂತ. ಆದ್ರೆ ಅವನ ಮಾತಿಗೆ ಯಾರು ಸೊಪ್ಪು ಹಾಕಲಿಲ್ಲ. ಆದಕಾರಣ ಎಲ್ಲರೂ Hilary Clinton ಗೆದ್ದೇ ಗೆಲ್ಲುತ್ತಾರೆ ಎಂದುಕೊಂಡಿದ್ದ ಇಡೀ ವಿಶ್ವ ಕ್ಕೆ Donald Trump ಗೆಲುವು ಆಶ್ಚರ್ಯವಾಗಿತ್ತು. Hilary ಬ್ಲೂ ಲ್ಯಾಬ್ಸ್ ಹಾಗು ಗೂಗಲ್ ಜೊತೆ ಡೇಟಾ ಒಪ್ಪಂದಕ್ಕೆ Cambridge Analytica ಚಳ್ಳೆ ಹಣ್ಣು ತಿನಿಸಿ Donald Trump ಗೆಲುವಿಗೆ ಕಾರಣವಾಗಿತ್ತು. ನೀವು ಯಾವ ವ್ಯಕ್ತಿಯನ್ನು ಲೈಕ್ ಮಾಡುತ್ತೀರೋ ಆ ವ್ಯಕ್ತಿಯ tailor made ವಿಡಿಯೋ ಮಾಡಿ ಅವರವರಿಗೆ personally ಕಳಿಸುವಷ್ಟು Cambridge Analytica ಪ್ರಭಾವಶಾಲಿಯಾಗಿತ್ತು. Trump ಅಮೇರಿಕಾ ಭಾರತೀರನ್ನು, ಹಿಂದೂಗಳ ಬಗ್ಗೆ ಒಳ್ಳೆ ಮಾತನಾಡುವುದಕ್ಕೂ ಇದೆ Cambridge Analytica ಕಾರಣ.

ಇನ್ನು ನಮ್ಮ ದೇಶಕ್ಕೂ Cambridge Analytica ಎತ್ತಣ ಸಂಬಂಧ ಎಂದು ಕೇಳಿದರೆ - ಅದುವೇ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ Strategic Communication Laboratories ಜೊತೆ ಮಾಡಿಕೊಂಡಿರುವ ಒಪ್ಪಂದ. of   course ಅವರು ಯಾರ ಜೊತೆಯಲ್ಲಾದರು ಒಪ್ಪಂದ ಮಾಡಿಕೊಳ್ಳಬಹುದು ಆದ್ರೆ ruthless working style   ನಮ್ಮ ನಿಮ್ಮ cell ಫೋನ್ ಅನ್ನು ನೇರವಾಗಿ hack ಮಾಡಿತ್ತದೆ.

ಆಧಾರ್ ಕಾರ್ಡ್ ಲಿಂಕ್ ಮಾಡುವುದರಿಂದ ನಮ್ಮ privacy ಗೆ ಚ್ಯುತಿ ಬರುತ್ತೆ ಎಂದು ಬೊಬ್ಬೆ ಹೊಡೆದ ಕಾಂಗ್ರೆಸ್ ಇಂದು Strategic Communication Laboratories ಜೊತೆಗಿನ ಒಪ್ಪಂದವನ್ನು ಏನೆಂದು ಹೇಳುತ್ತಾರೆ?

ಕಳೆದ ವರುಷ ನವ ಭಾರತ ಟೈಮ್ಸ್ ಒಂದು article ಅನ್ನು ಪ್ರಕಟಿಸಿತು, ಅದೇನೆಂದರೆ ರಾಹುಲ್ ಗಾಂಧಿ ಅವರ ಬಳಿ ಮೋದಿಯವರನ್ನು ಎದುರಿಸಲು ಒಂದು ಬ್ರಹ್ಮಾಸ್ತ್ರ ಇದೆ, Cambridge ಅನಾಲಿಟಿಕ ಜೊತೆ ಒಂದು ಒಪ್ಪಂದವಾಗಿದೆ ಮತ್ತು ಅದರ ಪ್ರಕಾರ ಮಧ್ಯಪ್ರದೇಶ್, ರಾಜಸ್ಥಾನ, ಗುಜರಾತ್ ಹಾಗು ಕರ್ನಾಟಕದಲ್ಲಿ ಕಾಂಗ್ರೆಸ್ ನ ಪರವಾಗಿ Cambridge Analytica ಕೆಲಸ ಮಾಡುತ್ತದೆ ಎಂದು. ಇದಕ್ಕೆ ಒಂದು ಸೂಕ್ತ ಉದಾಹರಣೆ ಎಂದರೆ ಕಳೆದ ಗುಜರಾತ್ ಎಲೆಕ್ಷನ್ನಲ್ಲಿ ಮೂರು so called ಮೇಧಾವಿಗಳನ್ನು ಹುಟ್ಟು ಹಾಕಬೇಕೆಂದು CA ಸೂಚಿಸಿತು - ಅದುವೇ, ಜಿಗ್ನೇಶ್ ಮೇವಾನಿ, ಹಾರ್ದಿಕ್ ಪಟೇಲ್ ಹಾಗು ಅಲ್ಪೇಶ್ ಠಾಕೂರ್. ಅವರನ್ನು ಎತ್ತಿ ಕಟ್ಟಿ, ರಾಜ್ಯವನ್ನು ಜಾತಿ ಹೆಸರಿನಿಂದ ಹೊಡೆಯಬೇಕೆಂಬ idea ಕೊಟ್ಟದ್ದು ಇದೆ Cambridge Analytica
.
ರಾಹುಲ್ ಗಾಂಧಿ ಗೆ Temple Run ಐಡಿಯಾ ಕೊಟ್ಟದ್ದು ಇದೆ CA . ಇನ್ನು ಕರ್ನಾಟಕದಲ್ಲಿ ಲಿಂಗಾಯತ - ವೀರಶೈವ ವಿಭಜನೆ ಆಗಬೇಕು ಎಂದು ಮಾಹಿತಿ ಕೊಟ್ಟಿದ್ದು ಇದೆ CA . ಸಿದ್ದರಾಮಯ್ಯ ಅವರು ಇದನ್ನು ಕಸದ ಬುಟ್ಟಿಗೆ ಎಸೆಯಬೇಕೆಂದಿದ್ದರು ಆದರೆ CA ಇದು ಯಾವ ಸಂಧರ್ಭದಲ್ಲಿ ಪ್ರಕಟಿಸಬೇಕು ಎಂದು ಹೇಳಿತು, ಅದುವೇ ಚುನಾವಣೆಗೂ ಕೆಲವೇ ತಿಂಗಳುಗಳ ಮುಂಚಿತವಾಗಿ.

CA ಎಲ್ಲಿವರೆಗೂ ಮುಂದುವರೆದಿದೆ ಎಂದರೆ ಅವರೇ ಹೇಳಿಕೊಂಡಿರುವತೆ, ಯಾವ ಜಾಗದಲ್ಲಿ ಯಾವ ಜಾತಿ, ಪಂಗಡ ಇವೆಯೋ,ಏನು ಹೇಳಿದರೆ ಅವರನ್ನು ಜಾತಿಯನುಸಾರವಾಗಿ ಒಡೆಯಬಹುದು ಎಂದು ಸ್ಪಷ್ಟವಾಗಿ ಹೇಳಿದೆ. ಅಧ್ಯಯನ ಮಾಡುತ್ತೇವೆ ಎಂದಿದ್ದಾರೆ. ಅಂದರೆ ಬಿಹಾರ್ ಚುನಾವಣೆಗೆ Strategic Communication Laboratories ನಿಂದ ಮಾಹಿತಿ ಪಡೆದಿರುವುದಾಗಿ ಸ್ವತಃ ರಮ್ಯಾ ಅವರು ಮಾರ್ಚ್ ೨೮ರಂದು ಬರ್ಖಾ ದುತ್ತ್ ಅವರಿಗೆ ನೀಡಿದ ಮಾಹಿತಿಯಲ್ಲಿ ಬಹಿರಂಗ ಪಡಿಸಿದ್ದಾರೆ. CA ಇಂಡಿಯನ್ ಕಾಂಗ್ರೆಸ್ ಅನ್ನು ತನ್ನ loyal ಕಸ್ಟಮರ್ ಎಂದು ಹೇಳಿ ಅವರ front office ನಲ್ಲಿ ಹಸ್ತದ ಗುರುತಿನ ಒಂದು ಚಿತ್ರವನ್ನು ಹಾಕಿದ್ದಾರೆ.


ಈ ರೀತಿ ದೇಶವನ್ನ sabotage ಮಾಡಲು ಹೊರಟಿರುವ ಎಲ್ಲ ವರ್ಗದವರಿಗೂ, ಮೇ ೧೨ನೆ ತಾರೀಕು ನಿಮ್ಮ ಮತವನ್ನ ಯೋಚಿಸಿ ಚಲಾಯಿಸಿ.

http://www.dnaindia.com/india/report-bbc-documentary-clip-goes-viral-shows-congress-poster-in-office-of-cambridge-analytica-s-ex-ceo-alexander-nix-2598837

ಸೆಲೆ - ಬಿಬಿಸಿ
       - CS

Comments