ನೂರು ವರ್ಷದ ವ್ಯರ್ಥ ಜೀವನಕ್ಕಿಂತ ಮೂರು ದಿನದ ಸಾರ್ಥಕ ಜೀವನವೇ ಲೇಸು
ಸೆಲೆ - ಅಂತರ್ಜಲ
ರಚನೆ - ತಿಲಕ್
ಮನುಜನ ಮೂರು ದಿನದ ತನ್ನ ಬದುಕಿನಲ್ಲಿ ಬರಿ ಸ್ವಾರ್ಥ, ದುರಾಸೆ, ಮೋಸ, ಮದ-ಮತ್ಸರ, ಹೆಣ್ಣು, ಹೊನ್ನು, ಮಣ್ಣುಗಳ ಬಗ್ಗೆ ಚಿಂತಿಸಿ, ಚರ್ಚಿಸಿ, ಅನುಭವಿಸುದರೊಳಗೆ ನಮ್ಮ ನಿಜವಾದ ಅಂತಸ್ತ್ವದ ಆಯಸ್ಸು ಮುಗಿದಿರುತ್ತದೆ. ಮಣ್ಣು ನಮ್ಮನ್ನು ಬಯಸಿರುತ್ತದೆ. ಇತ್ತಿಚೀಗೆ ದೂರವಾಣಿಯಲ್ಲಿ ಹೀಗೊಂದು ಸಂದೇಶ ಓದಿದೆ - "ನೀವು ಎಷ್ಟು ಸಂಪಾದನೆ ಮಾಡುತ್ತಿರಿ ಎಂದರೆ ನೀವು ಅಸ್ವಸ್ಥಗೊಂಡಾಗ ನಿಮ್ಮ ಮಕ್ಕಳು ವೈದ್ಯರನ್ನ ಕರೆಸಬೇಕೇ ಹೊರೆತು ವಕೀಲರನಲ್ಲ." ಇದರ ಬಗ್ಗೆ ವಿವರಣೆ ನೀಡುವ ಅವಶ್ಯಕತೆ ಇಲ್ಲ ಅಂತನಿಸುತ್ತದೆ.
ಹೀಗೆ ಸ್ವಾರ್ಥದ ಬಗ್ಗೆ ನಾ ಚಿಂತಿಸುತ್ತಿದ್ದಾಗೆ ಥಟ್ಟನೆ ನೆನಪಾದದ್ದು, ನಿಸ್ವಾರ್ಥಕ್ಕೆ ಹೆಸರುವಾಸಿಯಾದ ಮತ್ತ್ತೊಂದು ಹೆಸರೇ "ಮುರಳಿಧರ್ ದೇವಿದಾಸ ಅಮಟೆ." ಇವರ ಬಗ್ಗೆ ತುಂಬ ಜನಕ್ಕೆ ಗೊತಿರಲಿಕ್ಕಿಲ್ಲ. ಇವರು ೧೯೧೪ ಡಿಸೆಂಬರ್ ೨೬ರಂದು ಮಹಾರಾಷ್ಟ್ರದ ವಾರದ ಜಿಲ್ಲೆಯ ಹಿಂಗಂಘಾಟ್ ಎಂಬಲ್ಲಿ ಒಂದು ಶ್ರೀಮಂತ ಕುಂಟುಂಬದಲ್ಲಿ ಜನಿಸಿದರು. ತಂದೆ ಆಗಿನ ಆಂಗ್ಲ ಸರ್ಕಾರದಲ್ಲಿ ಉತ್ತಮ ಹುದ್ದೆ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಹುಟ್ಟುತ್ತಲೇ ಶ್ರೀಮಂತಿಕೆಯ ರಗ್ಗು ಹೊತ್ತಿದ್ದ ದೇವಿದಾಸ ತನ್ನ ೧೪ನೇ ವಯಸ್ಸಿಗೆ ಪಿಸ್ತುಲೂ, ೧೮ಕ್ಕೆ ಕಾರು ಎಲ್ಲಾ ಹೊಂದಿದ್ದ. ಜೇವನಕ್ಕೆ ಯಾವುದೇ ಕೊರತೆ ಇರಲಿಲ್ಲ, ಬಡತನದ ಹೆಸರು ಸಹ ಕೇಳಿರಲಿಲ್ಲ.
ವೃತ್ತಿಯಲ್ಲಿ ವಕೀಲರಾಗಿದ್ದ ಅಮಟೆ ತಮ್ಮನ್ನು ಸ್ವತಂತ್ರ ಸಂಗ್ರಾಮದಲ್ಲಿ ತೊಡಗಿಸಿಕೊಂಡಿದ್ದರಲ್ಲದೆ, ಬಾಲಕಿಯೊಬ್ಬಳನ್ನು ರಕ್ಷಿಸಿದ ಕಾರಣ ಮಹಾತ್ಮಾ ಗಾಂಧಿ ಅವರಿಂದ ಅಭಯ ಸಾಧಕ ಎಂಬ ಬಿರುದನ್ನೂ ಪಡೆದುಕೊಂಡಿದ್ದನ್ನು ಸ್ಮರಿಸಿಕೊಳ್ಳಲೇಬೇಕು. ಆಗಿನ ಕಾಲದಲ್ಲಿ ಕುಷ್ಠ ರೋಗ, ಪ್ಲೇಗ್ ರೋಗದಷ್ಟೇ ಭಯಾನಕವಾಯಿತ್ತು. ತನ್ನ ಸುತ್ತ ಅನೇಕರು ಕುಷ್ಟ ರೋಗದಿಂದ ಬಳಲುತ್ತಿದ್ದನು ಕಂಡು ತಾವೇ ಬಾಕಿಲಿ ಎಂಬ ಬ್ಯಾಕ್ಟೀರಿಯಾವನ್ನು ತಮ್ಮ ದೇಹದಲ್ಲಿ ಇಂಜೆಕ್ಟ್ ಮಾಡಿಕೊಂಡು, ಕುಷ್ಠ ರೋಗ ಊಹಿಸಿದಷ್ಟು ಭಯಾನಕವಲ್ಲ ಎಂಬುದನ್ನು ತೋರಿಸಿದರು.
ಹೀಗಿರುವಾಗ, ಅಮಟೆ ಅವರು ರೋಗಗ್ರಸ್ಥರನ್ನು ಶೃಶ್ರಿಸಲು ೧೯೪೯ರಲ್ಲಿ "ಆನಂದವನ" ಎಂಬ ಆಶ್ರಮವನ್ನು ಸ್ಥಾಪಿಸಿ ರೋಗ ನಿವಾರಣೆಗೆ, ಅಸ್ಪ್ರುಷತೆಗೆ ತಿಲಾಂಜಲಿ ಹಾಡಲು ಮುನ್ನುಡಿ ಬರೆದರು. ಏತನ್ಮದ್ಯೆ, ಅಮಟೆ ಅವರು ನಿಟ್ ಮೂವ್ಮೆಂಟ್ ಗೆ ಮುನ್ನುಡಿ ಬರೆದು, ನರ್ಮದಾ ಬಚಾವ್ ಆಂದೋಲನದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.
ಅಮಟೆ ಅವರು ಇಂದು ಗುಣಶಾಸ್ತ್ರಿ ಅವರನ್ನು ವಿವಾಹವಾಗಿ, ತಮ್ಮ ಎರಡು ಮಕ್ಕಳನ್ನು ವೈದ್ಯರನ್ನಾಗಿಸಿ, ಮನೆಗೆ ವೈದ್ಯ ವೃತ್ತಿಯಲ್ಲಿ ಪರಿಣಿತಿ ಹೊಂದಿದ್ದ ಸೊಸೆಯರನ್ನು ತಂದು ಅವರು ಸಹ ನಿಹಕಲ್ಮಷವಾಗಿ ಕಾಡು ಜನರ ಹಾಗು ಪ್ರಾಣಿಗಳ ಸುರಕ್ಷಿತೆಗಾಗಿ ಸೇವೆಸಲ್ಲಿಸುವಲ್ಲಿ ಯೆಶಸ್ವಿಯಾದರು. ಕಾಡಿನಲ್ಲಿ ಶಾಲೆಯೊಂದನ್ನು ಪ್ರಾರಂಭಿಸಿ, ರೋಗಗ್ರಸ್ಥ ಪ್ರಾಣಿಗಳಿಗೆ ಆಶ್ರಯ ನೀಡುತ್ತಾ ಮಾಡಿದ ಸೇವೆ ಮಾತಿಗಾಗಲಿ, ಹಣಕ್ಕಾಗಲಿ ನಿಲುಕದಂತಹುದು. ಅವರ ಆನಂದವಾದಲ್ಲಿ ೫೦೦೦ಕ್ಕೂ ಹೆಚ್ಚು ಕುಟುಂಬಗಳು ಆಶ್ರಯ ಪಡೆದಿದ್ದು, ಮುಂದಿನ ವರುಷಗಳಲ್ಲಿ ಅಶೋಕವನ ಹಾಗು ಸೋಮನಾಥ್ ಎಂಬ ಆಶ್ರಮವನ್ನು ಕುಷ್ಠ ರೋಗದಿಂದ ಬಳಲುತ್ತಿದ್ದವರ ಒಳಿತಿಗಾಗಿ ಸ್ಥಾಪಿಸಿದರು.
ಇವರ ನಿಷ್ಕಲ್ಮಶ ಸೇವೆಯನ್ನರಿತ ಸರಕಾರ ಅಮಟೆ ಅವರಿಗೆ ೧೯೭೧ ರಲ್ಲಿ ಪದ್ಮಶ್ರೀ, ೮೫ರಲ್ಲಿ ಮಗಸೇಸಾಯ್, ೮೬ರಲ್ಲಿ ಪದ್ಮವಿಭೂಷಣ ಹಾಗು ೧೯೯೯ರಲ್ಲಿ ಗಾಂಧಿ ಪ್ರಶಸ್ತಿಯನ್ನಿತ್ತು ಗೊರವಿಸಲಾಗಿತ್ತು. ತನ್ನ ಅಪಾರ ಶ್ರೀಮಂತಿಕೆಯನ್ನು ಗಾಳಿಗೆ ತೂರಿ ಬಡವರ ಉದ್ದಾರಕ್ಕೆ ಶ್ರಮಿಸಿದ ಸ್ವಚ್ಛ ಮನಸ್ಸಿನ ಅಮಟೆ ಕುಟುಂಬಕ್ಕೆ ಶತಕೋಟಿ ಪ್ರಣಾಮಗಳು

Comments
Post a Comment