ನನ್ನಪ್ಪ ಆಗಲಿ ನನ್ನಮ್ಮ ಆಗಲಿ, ದೇಶ ಎಂಬುದು ಬಂದಾಗ ನನಗೆ ನನ್ನ ದೇಶವೇ ಮುಖ್ಯ

ತಿಲಕ್
ಪ್ರಸಕ್ತ ಜಾಯಮಾನದಲ್ಲಿ ಎಲ್ಲಾ ಸತ್ಪ್ರಜೆಗಳ ಬಾಯಲ್ಲಿ ಬರುವ ಒಂದೇ ಮಾತು - ತೈಲ ಬೆಲೆ ಯಾಕೆ ಕಡಿಮೆ ಆಗಲಿಲ್ಲ, ಯಾಕೆ ತೈಲೋತ್ಪನ್ನವನ್ನು ಜಿ ಸ್ ಟಿ ಶುಲ್ಕಗಳಲ್ಲಿ ಸೇರಿಸಿಲ್ಲ ಅಂತ. ಇರಲಿ! ಸೈನಿಕರಿಗೆ ರಕ್ಷಾ ಕವಚವಿಲ್ಲ, ಅವರ ಕಾಲುಗಳು ಮಂಜಿನಲ್ಲಿ ಕೊಳೆಯುತ್ತಿವೆ ಅದು ನಮಗೆ ಬೇಕಿಲ್ಲ, ದಿನೇ ದಿನೇ ಚಿನ್ನ ಗಗನಕ್ಕೇರುತಿದೆ ಅದು ಬೇಕಿಲ್ಲ. ನಮಗೆ ಬೇಕಿರೋದು ತೈಲ ಬೆಲೆಯಲ್ಲಿ ಪರಿಷ್ಕರಣೆ ಅಷ್ಟೇ.

ಆಣೆಕಟ್ಟು ಹೊಡೆದು ನೂರಾರು ಎಕ್ಕರೆ ಪ್ರದೇಶದಲ್ಲಿ ಲಕ್ಷ ಗಟ್ಟಲೆ ಬೆಳೆ ಹಾನಿಯಾಗಿದೆ. ತಿನ್ನುವ ಅಕ್ಕಿ, ಸಕ್ಕರೆ, ಈರುಳ್ಳಿ, ಬಳಕೆ ಮಾಡುವ ಸೀಮೆ ಎಣ್ಣೆ, ಅಡುಗೆ ಅನಿಲ ಎಲ್ಲವೂ ದುಬಾರಿ ವೆಚ್ಚದಲ್ಲಿ ಆಮದು ಮಾಡಿಕೊಂಡು ನಮಗೆ ನಷ್ಟದ ರೂಪದಲ್ಲಿ ಕೊಡುತಿರುವುದು ನಮ್ಮ ಪ್ರಜೆಗಳಿಗೆ ಅರಿಯದೆ ಹೋಯಿತೇ? ಒಂದೆರಡು ರುಪಾಯೀ ಹೆಚ್ಚಿಗೆ ಕೊಟ್ಟಿದ್ದಕ್ಕೆ ಬೊಬ್ಬೆ ಹೊಡೆಯೋ ಜನ ಬೇರೆಯದರ ಬಗ್ಗೆ ಯೋಚಿಸಿಯಾರೇ?

ಸ್ವಾರ್ಥಿಗಳಾಗಬೇಡಿ, ದೇಶದ ಬಗ್ಗೆ ಚಿಂತಿಸಿ. ಒಂದೆರಡು ರುಪಾಯೀ ಕೊಟ್ಟರೆ ನಾವು ಕಳೆದುಕೊಳ್ಳುವುದೇನಿಲ್ಲ. ಕೆಲವೊಂದು ಪತ್ರಕರ್ತರು ಹೇಳುವ ಪ್ರಕಾರ - ಹೆಚ್ಚಿಗೆ ಬಂದ ಹಣದಿಂದ ಸರಕಾರ ಆಸ್ಪತ್ರೆ ಆಗಲಿ, ರಸ್ತೆಗೆ ಡಾಂಬಾರಾಗಲಿ ಬಿದ್ದಿದೆಯೇ ಅಂತ. ಒಮ್ಮೆ ಯೋಚಿಸಿ ನೋಡಿ, ಇದು ಪ್ರಪಂಚದ ಏಳನೇ ದೊಡ್ಡ ರಾಷ್ಟ್ರ, ನಿಮ್ಮ ಮನೆಯಂಗಳವಲ್ಲ, ಹಾಗು ಜನಸಂಖ್ಯೆಯಲ್ಲಿ ಎರಡನೆಯ ದೊಡ್ಡ ರಾಷ್ಟ್ರ. ೭೦ ವರ್ಷದ ಜಿಡನ್ನು ತೆಗೆಯಬೇಕಾದರೆ ಕೆಲವೊಮ್ಮೆ ನಾವು ತ್ಯಾಗಕ್ಕೆ ಸನ್ನದರಾಗಿರಬೇಕು.

ಟೆವಿಯಲ್ಲಿ ಕುಳಿತು ಛೇಡಿಸುವ ರಾಜಕಾರಣಿಗಳು ಒಬ್ಬರಾದರು ಬಡವರಿದ್ದಾರೆಯೇ? ಇದ್ದರೆ ಬೆರೆಳೆಣಿಕೆ ಮಾತ್ರ. ದೇಶಕ್ಕೆ ರೋಹಿಂಗ್ಯಗಳು ವಲಸೆ ಬರುತ್ತಿದ್ದಾರೆ, ಪಾಕ್-ಚೀನಾ ಕತ್ತಿ ಮಸೆಯುತ್ತಿವೆ, ಮತಂತರಗಳು ನೆಡೆಯುತ್ತಿವೆ, ಕಗ್ಗೊಲೆಗಳು, ಹಗರಣಗಳು ಎಲ್ಲ ಬಿಟ್ಟು ತೈಲ ಬೆಲೆಯ ಬಗ್ಗೆ ಸಗ್ಗಿಲ್ಲದೆ ಚಿಂತನೆ ನೆಡೆಸುತ್ತಿದ್ದಾರೆ.

ಈ ಅಂಕಣ ಯಾವ ಪಕ್ಷಕ್ಕೂ, ಯಾವ ರಾಜಕಾರಣಿಯನ್ನು ಉದ್ದೇಶಿಸಿ ಬರೆದಿಲ್ಲ. ಯಾವ ಪಕ್ಷಕ್ಕೂ ಬೆಣ್ಣೆ ಹಚ್ಚುವ ಹುಚ್ಚು ಪ್ರಮೇಯ ನಮಗಿಲ್ಲ. ನಮ್ಮಲೇ ಲಕ್ಷಾಂತರ ರುಪಾಯೀ ಆದಾಯ ಇರುವವರು ರೈತರೆಂದು ತೆರಿಗೆ ವಿನಾಯಿತಿ ಪಡೆಯುತ್ತಿದ್ದರು ತೈಲ ಬೆಲೆಯ ಬಗ್ಗೆ ವಾಗ್ವಾದ ಮಾಡುವಾಗ ವಾಕರಿಕೆ ಬರುತ್ತದೆ.

ನನ್ನಪ್ಪ ಆಗಲಿ ನನ್ನಮ್ಮ ಆಗಲಿ, ದೇಶ ಎಂಬುದು ಬಂದಾಗ ನನಗೆ ನನ್ನ ದೇಶವೇ ಮುಖ್ಯ. ಸ್ವಾರ್ಥಿಗಳಬೇಡಿ, ವಿಶ್ವಗುರು ಆಗುವ ಭಾರತದ ಕನಸಿಗೆ ನಿಮ್ಮ ಮಸಿ ಹಚ್ಚ ಬೇಡಿರಿ. ಈ ದರ ಪರಿಷ್ಕರಣೆಯೆಲ್ಲ ನಮ್ಮ ಒಳಿತಿಗಾಗಿಯೇ. 

Comments