ಲೋಕಮಾನ್ಯ ತಿಲಕರ ಗಣೇಶೋತ್ಸವದ ಅಭಿಯಾನ ಸಾರ್ಕಥವಾಯ್ತು ಮುಖ್ಯಮಂತ್ರಿಗಳೇ




ರಚನೆ- ತಿಲಕ್
ಸುದ್ದಿ ಸೆಲೆ - ಸಾಮಾಜಿಕ ಜಾಲತಾಣ

ಹಿಂದೂ - ಮುಸಲ್ಮಾನರು - ಕ್ರಿಸ್ತಾನರು ಈ ಹಿಂದೆ ಹೀಗೆ ಹೊಡೆದಾಡಿದುಂಟೆ? ಸ್ವಲ್ಪ ಯೋಚಿಸಿ. ಅವರವರ ರಾಜಕೀಯ ಸ್ವಾರ್ಥಕ್ಕೋಸ್ಕರ ನಮ್ಮನ್ನು ಗೊಂಬೆ (ಗೂಬೆ)ಗಳಂತೆ ಆಡಿಸುತ್ತಿದ್ದಾರೆ.
ನಾವು ಎಲ್ಲಿ ಬಂದು ನಿಂತಿದ್ದೇವೆ ಎಂಬುದ ಅರಿವು ನಿಮಗಿದೆಯೇ? ಕರ್ನಾಟಕ ಎಂಬ ಸುಂದರ ಸ್ವಚ್ಛ ಸರಳ ರಾಜ್ಯ ಈಗೀಗ ಕೇವಲ ಹಿಂದೂ ವಿರೋಧಿ ರಾಜ್ಯವಾಗಿ ರೂಪಲ್ಪಡುತಿದೆ.
ಅದ್ಯಾರೋ ಮಂತ್ರಿ ಚೀನಿ ಸ್ವಾತಂತ್ರೋತ್ಸವ ಆಚರಿಸಿದೆನು ಎಂದು ನಾಚಿಕೆ ಇಲ್ಲದೆ ಹೇಳುವ. ಇನ್ನೊಬ್ಬ(ಳು) ಪಾಕಿಸ್ತಾನ ಸ್ವರ್ಗ ಎಂದರು(ಳು).
ನಾಚಿಕೆ ಆಗಬೇಕು ನಿಮ್ಮಗೆ ಹಾಗು ನಿಮ್ಮ ಸರ್ಕಾರಕ್ಕೆ.


ಅದೆಲ್ಲ ಇರಲಿ, ನೆನ್ನೆ ನಮ್ಮ ಸನ್ಮಾನ್ಯ ಮುಖ್ಯಮಂತ್ರಿಗಳು ಗಣೇಶ ಹಬ್ಬದ ಪ್ರಯುಕ್ತ ಒಂದು ಆದೇಶ ಹೊರಡಿಸಿದ್ದಾರೆ, ಅದೇನಂದರೆ -
- ಬೀಧಿಗಳಲ್ಲಿ ಹಬ್ಬ ಆಚರಿಸುವವರು ೧೦ ಲಕ್ಷ ಠೇವಣಿ ಇಡಬೇಕಂತೆ

- ಗಣೇಶ ಮೂರ್ತಿಯ ಆಕಾರ, ಎತ್ತರ, ಬಣ್ಣ ಕಾಂಗ್ರೆಸ್ ಸರ್ಕಾರ ಹೇಳಿದಂತೆ ಇರಬೇಕಂತೆ.

- ಅವರು ಹೇಳಿದ ಅವಧಿಯೊಳಗೆ ಗಣೇಶ ವಿಸರ್ಜನೆ ಮಾಡಬೇಕಂತೆ.

- ಮಸೀದಿ, ಚ್ರುಚುಗಳಿರುವ ಬೀದಿಗಳಲ್ಲಿ ಮೆರವಣಿಗೆ ನಿಷಿದ್ಧ

- ಪಟಾಕಿ, ಹಾಡು - ಕುಣಿತ, ಬಣ್ಣದೋಕುಳಿ ಎಲ್ಲದಕ್ಕೂ ನಿರ್ಬಂಧ.

- ಕೆಲವು ಲಕ್ಷಕ್ಕಿಂತ ಹೆಚ್ಚಿನ ಭಕ್ತದಿಗಳು ಸೇರುವ ಹಾಗಿಲ್ಲ.

ನನ್ನ ಉತ್ತರ -

 - ನೀವು ಚುನಾವಣೆಗೂ ಮುನ್ನ ಆಶ್ವಾಸನೆ ಕೊಡುತಿರಲ್ಲ, ನಮ್ಮ ಹೆಸರಿನಲ್ಲಿ ೧೦ ಲಕ್ಷ ಠೇವಣಿ ಇಡೀ, ನೀವು ಸಮರ್ಥವಾಗಿ ಕಾರ್ಯ ನಿರ್ವಹಿಸಿದರೆ ನಿಮ್ಮ ಹಣ ನಿಮಗೆ, ಇಲ್ಲ ನಮಗೆ. ಒಪ್ಪಿಗೆಯೇ?

 - ಪ್ರಜೆಗಳು ನಮ್ಮ ಮಂತ್ರಿ, mla ಗಳು ಇಷ್ಟೇ ಎತ್ತರ ಇರಬೇಕು, ಇಷ್ಟೇ ತೂಕ ಇರಬೇಕು, ಹೋಗಲಿ ಇಷ್ಟೇ ವಿದ್ಯಾವಂತರಾಗಿರಬೇಕು ಎಂದರೆ ನೀವು ಒಪ್ಪುತೀರಾ? ನಿಮ್ಮಲ್ಲಿ ಎಷ್ಟು ಜನ ಕನಿಷ್ಠ ಡಿಗ್ರಿ ತೊಗೊಂಡಿದ್ದಿರಾ?

 - ಮಹಾತ್ಮಾ ಗಾಂಧಿ ಅವರ ಗುರುಗಳಲ್ಲಿ ಒಬ್ಬರಾದ ಲೋಕಮಾನ್ಯ ತಿಲಕ್ ಅವರು ಇಂದು ಬದುಕಿದ್ದರೆ ನಿಮ್ಮ ಈ ನಿರ್ಬಂಧನೆಗಳನ್ನು ನೋಡಿ ತಲೆ ಚಚ್ಚುಕೊಳ್ಳುತ್ತಿದ್ದರು , ಅಹ್ ಅಂತೆಯೇ ಅವರು ನಿಮ್ಮ ಕಾಂಗ್ರೆಸ್ನವರೇ.

- ಯಾವ ಊರಿನಲ್ಲಿ ಚ್ರುಚ್ ಹಾಗು ಮಸೀದಿಗಳು ಇಲ್ಲ ಸ್ವಲ್ಪ ಹೇಳಿ, ನಿಮ್ಮ ಪ್ರಕಾರ ನಾವು ಹಬ್ಬವನ್ನು ಮನೆಯಲ್ಲೇ ಮಾಡಿ ನಮ್ಮ ಮನೆಯ ತೊಟ್ಟಿಯಲ್ಲಿ ವಿಸರ್ಜನೆ ಮಾಡಬೇಕು.

- ಇದು ಸ್ವತಂತ್ರ ದೇಶ, ಹಾಡು, ಕುಣಿತಕ್ಕೆ ಯಾರಪ್ಪನ ಅಪ್ಪಣೆಯೂ ಬೇಕಿಲ್ಲ.ನೀವು ಚುನಾವಣೆ ಗೆದ್ದಾಗ, ಒಂದೂರಿನಲ್ಲಿ ಭಾಷಣಕ್ಕೂ ಮುನ್ನ ಪಟಾಕಿ ಬೇಕು, ನಿಮ್ಮ ಹುಟ್ಟು ಹಬ್ಬ ಆಚರಿಸಲು ಪಟಾಕಿ ಬೇಕು, High Commandನ
    ಯಾರಾದರೊಬ್ಬ ಬಂದರು ಸದ್ದು ಮಾಡಲು ಪಟಾಕಿ ಬೇಕು, ಆದರೆ ಗಣೇಶೋತ್ಸವಕ್ಕೆ ಮಾತ್ರ ಬೇಡ.ಹಿಟ್ಲರ್ ಸಹ ಇಷ್ಟೊಂದು ನಿರ್ಬಂಧನೆಗಳನ್ನು ಹೇರಿದ್ದನೋ ಇಲ್ಲೆವೋ ಗೊತ್ತಿಲ್ಲ.

- ಟಿಪ್ಪು ಜಯಂತಿಗೆ ಇಲ್ಲದ ಕಟ್ಟು-ಪಾಡುಗಳು ಗಣೇಶ ಹಬ್ಬಕ್ಕೇಕೆ? ನಾವೇನು ಕತ್ತಿ ಹಿಡಿದು ಬೀದಿಗಳಲ್ಲಿ ಹೊಡೆದಾಡುತ್ತೇವೆ?

- ಕೊನೆಯದಾಗಿ, ನಿಮ್ಮಲ್ಲಿ ದಸರಾ ಹಬ್ಬ ಆಚರಿಸಲು ದುಡ್ಡಿಲ್ಲ ಆದರೆ ಟಿಪ್ಪು ಜಯಂತಿ ಮಾಡಲು ಹಣ ಕೊಳೆಯುತ್ತಿದೆ.

- ಯಾವ ಮತಕ್ಕೂ, ಧರ್ಮಕ್ಕೂ ಇಲ್ಲದ ನಿರ್ಬಂಧನೆಗಳು ಈಗ್ಯಾಕೆ?


Comments