ಮೋಹಕ ರಾಜಕುಮಾರಿಯ ದಾರುಣ ಕಥೆ - ಪ್ರಿನ್ಸೆಸ್ ಡಯಾನಾ
ರಚನೆ - ತಿಲಕ್
ಆಕೆಯ ಹುಟ್ಟಿನಿಂದ ( ೧ ಜೂಲೈ ೧೯೬೧) ಸಾಯುವವರೆಗೂ ( ೩೧ ಆಗಸ್ಟ್ ೧೯೯೭ ), ರಾಣಿ ಡಯಾನ ಆ ಯುಗದ ಬಹಳ ಪ್ರಭಾವಶಾಲಿ ಮಹಿಳೆಯಾಗಿದ್ದಳು. ೧೯೮೦ ರಲ್ಲಿ ಡಯಾನ ತನಗಿಂತ ೧೩ ವರುಷ ದೊಡ್ಡವನಾಗಿದ್ದ ರಾಜಕುಮಾರ ಚಾರ್ಲ್ಸ್ ಜೊತೆ ಆತ್ಮೀಯ ಒಡನಾಟದ ಸಪ್ಪಳಗಳು ಕೇಳಿಬರುತ್ತಿದ್ದವು. ಆತ್ಮೀಯ ಒಡನಾಟ ಪ್ರೀತಿಗೆ ಜಾರಲು ಬಹಳ ದಿನ ಬೇಕಿರಲಿಲ್ಲ. ಜೂಲೈ ೨೯ ೧೯೮೧ ರ ಮುಂಜಾನೆಯಲ್ಲಿ ಇಪ್ಪತ್ಹ್ಹರ ತುಂಬು ಯೌವನ್ನದ ಡಯಾನ ರಾಜಕುಮಾರನ ಕೈ ಹಿಡಿದು ಬ್ರಿಟನ್ ಸಾಮ್ರಾಜಯದ ಯುವ ರಾಣಿಯಾದಳು. ಆ ಕಾಲಕ್ಕೆ ಅದು ಶತಮಾನದ ವಿವಾಹವೆಂದೇ ಬಿಂಬಾಸಲಾಗಿತ್ತು.
ವರ್ಷ ತುಂಬುವುದರೊಳಗೆ ಡಯಾನ ಒಂದು ಮಗುವಿನ ತಾಯಾಗಿದ್ದಳು. ೧೯೮೪ರ ಹೊತ್ತಿಗೆ ಮತ್ತೊಂದು ಮಗುವಿಗೆ ಜನ್ಮ ನೀಡಿದ್ದಳು. ಎಲ್ಲ ರೀತಿಯ ಸಕಲ ಸೌಕರ್ಯಗಳಿದ್ದರು ಮಕ್ಕಳು ಹೊರ ಪ್ರಪಂಚದ ಒಡನಾಟಕ್ಕೆ ಬೇರೆಯಬಾರದೆಂಬ ರಿವಾಜುಗಳನ್ನು ಡಯಾನ ಬಹು ಬೇಗನೆ ಮುರಿದು, ತನ್ನ ಮಕ್ಕಳನ್ನು ಹೊರ ಪ್ರಪಂಚಕ್ಕೆ ಪರಿಚಯಿಸಿದಳು.
ರಾಣಿ ಡಯಾನ ಬದುಕಿದ್ದೇ ಹಾಗೆ, ಜನರಿಂದ, ಜನರಿಗೋಸ್ಕರ ಬದುಕಿದ್ದ ಮಹಿಳೆ. ರಾಣಿಯ ವರ್ಚ್ಚಸ್ಸನ್ನು ಕಾಪಾಡಿಕೊಂಡು, ಎಲ್ಲ ಸಮಾಜಮುಖಿ ಕಾರ್ಯಗಳಲ್ಲಿ ತನ್ನನ್ನು ಸಂಪೂರ್ಣ ಅರ್ಪಿಸಿಕೊಂಡಿದ್ದಳು. ಇದು ಆಕೆಯನ್ನು ಸಮಾಜದಲ್ಲಿ ಅತ್ಯಂತ ಪ್ರಿಯ ಹಾಗು ಪ್ರಭಾವಶಾಲಿ ಮಹಿಳೆಯನ್ನಾಗಿಸಲು ಬಹಳ ಸಮಯ ಬೇಕಿರಲಿಲ್ಲ. ಆದರೆ ಇದು ರಾಜಮನೆತನಕ್ಕೆ ನುಂಗಲಾರದ ಬಿಸಿ ತುಪ್ಪವಾಗಿತ್ತು, ಏಕೆಂದರೆ ಅದು ರಾಜಮನೆತನದ ಸಂಪ್ರದಾಯಕ್ಕೆ ವಿರುದ್ಧವಾದ್ದು ಎಂಬುದು ಅವರ ಅನಿಸಿಕೆಯಾಗಿತ್ತು.
೧೯೮೬ರ ಹೊತ್ತಿಗೆ ಜೋಡಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿದಾದರೂ, ಮೊದಲಿನ ಸಲಿಗೆಯಾಗಲಿ, ಸಂಸಾರ ಸಾಮರಸ್ಯವಾಗಲ್ಲಿ ಇರಲಿಲ್ಲ. ಚಾರ್ಲ್ಸ್ ತನ್ನ ಮಾಜಿ ಪ್ರೇಯಸಿ ಕ್ಯಾಮಿಲ್ಲಾ ಪಾರ್ಕರ್ ಜೊತೆ ಸಾಂಗತ್ಯ ಬೆಳೆಸಿದ್ದ ಎಂಬ ವದಂತಿಗಳು ಡಯಾನಳನ್ನು ಬಹಳಷ್ಟು ಕಾಡಲಾರಂಭಿಸತ್ತು. ಇದೆ ಚಿಂತೆಯಲ್ಲಿ ಡಯಾನ ಬಲುಮಿಯಾ ಹಾಗು ಮಾನಸಿಕ ಖಿನ್ನತೆಗೆ ಒಳಗಾದಳು. ಅವಳ ಜೀವನದ ಅತ್ಯಂತ ಮಹತ್ತರ ತಿರುವಿಗೆ ತನಗರಿವಿಲ್ಲದಂತೆ ಸಜ್ಜಾಗಿದ್ದಳು.
ಆ ತನಕ ಬ್ರಿಟನ್ ಸಾಮ್ರಾಜ್ಯದ ಯಾವುದೇ ರಾಜಕುಮಾರಿ ಈ ರೀತಿಯಾಗಿ ಜನರೊಂದಿಗೆ ಆತ್ಮೀಯ ಒಡನಾಟ ಬೆಳೆಸಿರಲಿಲ್ಲ. ೧೯೯೨ ರಲ್ಲಿ ಎಲ್ಲರ ಊಹೇಯಂತೆ ಅಂದಿನ ಪ್ರಧಾನ ಮಂತ್ರಿ ಜಾನ್ ಮೇಜರ್, ರಾಜ ರಾಣಿಯ ವಿಚ್ಛೇದನವನ್ನು ಬಹಿರಂಗ ಪಡಿಸಿದರು. ೧೯೯೬ರ ಹೊತ್ತಿಗೆ ಅದಿಕೃಥವಾಗಿ ಜೋಡಿ ಬೇರೆಯಾಯಿತ್ತು. ರಾಜಕುಮಾರಿ ಡಯಾನ ಇನ್ನು ಕೇವಲ ಡಯಾನವಾಗಿ ಉಳಿದಳು ಆದರೆ ಜನರ ಹೃದಯಾಂತರಾಳದಲ್ಲಿ ಆಕೆ ಇನ್ನು ರಾಜಕುಮಾರಿಯಾಗಿಯೇ ಮನೆಮಾಡಿದ್ದಳು
೧೯೯೭ ರಲ್ಲಿ ತನ್ನ ಹೊಸ ಜೀವನ ಅರಸಿ ಹೋರಾಟ ಡಯಾನ, ಈಜಿಪ್ಟ್ನ ನ ಆಗರ್ಭ ಶ್ರೀಮಂತ ಡೋಡಿ ಫಾಯದ್ ನ ಜೊತೆ ಕಾಣಿಸಿಕೊಳ್ಳರಂಭಿಸಿದಳು. ಇದು ಬ್ರಿಟನ್ ರಾಜಮನೆತನಕ್ಕೆ ಮುಜುಗರದ ತಂದಿತ್ತು.
ತಮ್ಮ ಆಗಸ್ಟ್ ತಿಂಗಳ ವಿಹಾರ ಮುಗಿಸಿ ಬಂದಿದ್ದ ಡಯಾನ ಹಾಗು ಡೋಡಿ ಲಂಡನ್ ಗೆ ಬರುವ ಮುನ್ನ, ಫ್ರಾನ್ಸ್ ನಲ್ಲಿ ಇರುವ ಡೋಡಿಯ ಬಂಗಲೆಯಲ್ಲೆ ಉಳಿಯುವ ತೀರ್ಮಾನವಾಗಿತ್ತು. ನಂತರ ಅವರಿಬ್ಬರೂ ಗ್ರಾಂಡ್ ರಿಟ್ಜ್ ಹೋಟೆಲ್ ಗೆ ಪ್ರಯಾಣ ಬಳೆಸಿ ಮತೊಮ್ಮೆ ತಮ್ಮ ಯೋಜನೆಯನ್ನು ಬದಲಿಸಿ ಬಂಗಲೆಗೆ ವಾಪಸಾಗುತ್ತಿದ್ದರು. ಎಲ್ಲವೂ ಇಲ್ಲೇ ಶುರುವಾಗಿದ್ದು.
ಜೋಡಿಯು ವಿಧಿಯ ಕೊನೆಯ ಪಯಣಕ್ಕೆ ಸಜ್ಜಾಗಿತ್ತು
ಸಮಯ ಮಧ್ಯ ರಾತ್ರಿ ೦೦:೨೦.
ನೇರ ರಸ್ತೆಯನ್ನು ಬಿಟ್ಟು, ಸೀನೆ ನದಿಯನ್ನು ಸುತ್ತಿ ಹೋರಾಟ ಮರ್ಸೀಡೀಸ್ ಸ್ ೨೮೦ ಕಾರು ಪಾಂಟ್ ಡೇ ಅಲ್ಮಾ ಎಂಬ ಸುರಂಗವನ್ನು ಹೊಕ್ಕಿತ್ತು. ಚಾಲಕ ಹೆನ್ರಿ ಪಾಲ್ ( ಫ್ರೆಂಚ್ ಗುಪ್ತಚರ ಇಲಾಖೆಯ ವ್ಯಕ್ತಿ ಎಂದು ಹೇಳಲಾಗುತಿದೆ) ಹಾಗು ರಿಟ್ಜ್ ಹೋಟೆಲಿನ ಭದ್ರತೆ ಮುಖ್ಯಸ್ಥ ಟ್ರೆವೊರ್ ರೀಸ್ ಮುಂಬದಿ ಕುಳಿತ್ತಿದರು. ಡಯಾನಾ ಹಾಗು ಡೋಡಿ ಹಿಂಬದಿ ಇದ್ದರು.
ಸಮಯ ೦೦:೨೩, ಕಪ್ಪು ಸುಂದರಿ ಮರ್ಸೀಡೀಸ್ ಪಾಂಟ್ ಡೇ ಅಲ್ಮಾ ಎಂಬ ಸುರಂಗವನ್ನು ಹೊಕ್ಕಾಕ್ಷಣ, ಮುಂದೆ ಹೋಗುತಿದ್ದ ಫಿಯಟ್ ಕಾರಿನ ಬಲಭಾಗಕ್ಕೆ ೬೦ರ ವೇಗದಲ್ಲಿ ಸ್ಪರ್ಶಿಸಿದ ತಕ್ಷಣ ಚಾಲಕ ಹೆನ್ರಿ ಪಾಲ್ ನಿಯಂತ್ರಣ ತಪ್ಪಿದ ಕಾರು ಸುರಂಗದ ೧೩ನೇ ಕಂಬಕ್ಕೆ ರಭಸವಾಗಿ ಗುದ್ದಿ ನಿಂತಿತು. ಫಿಯಟ್ ಕಾರು ಏನು ಆಗಲೇ ಇಲ್ಲ ಎಂಬಂತೆ ಮುಂದೆ ಕಣ್ಮರೆಯಾಯಿತು, ಇಡೀ ಫ್ರಾನ್ಸ್ ದೇಶವೇ ಆ ಕಾರಿನ ಶೋಧ ನೆಡೆಸಿದರು ಅದರ ಒಂದು ಸಣ್ಣ ಕುರುಹು ಸಹ ಸಿಗಲಿಲ್ಲ.
ದಾರಿಹೋಕೋನೊಬ್ಬ ತುರ್ತು ಸೇವೆಗೆ ಕರೆ ಮಾಡಿ ಕೇವಲ ಆರು ನಿಮಿಷದೊಳಗೆ ಆಂಬುಲೆನ್ಸ್ ಸ್ಥಳಕ್ಕೆ ಧಾವಿಸಿ ಬಂತು. ಅಪಘಾತ ವಾಗಿದ್ದು ೦:೨೩ ಕ್ಕೆ ಆದರೆ ಡಯಾನ೨:೦೬ ರವರೆಗೂ ಆಸ್ಪತ್ರೆಗೆ ದಾಖಲಾಗಲಿಲ್ಲ. ಅಂದರೆ ಸುಮಾರು ೯೦ ನಿಮಿಷಗಳು ಆಕೆಯನ್ನು ಆಂಬುಲೆನ್ಸ್ ನಲ್ಲಿಯೇ ಇಡಲಾಗಿತ್ತು.
ಪ್ರಶ್ನೆ ೧ - ಅಂತಹ ನಗರದಲ್ಲಿ, ಅಂತಹ ಹೊತ್ತಿನಲ್ಲಿ ಆಸ್ಪತ್ರೆಗೆ ದಾಖಲಿಸು ಅಷ್ಟುಸಮಯ ಬೇಕಿತ್ತೆ?
ಅಪಘಾತದ ರಭಸಕ್ಕೆ ಕಾರ್ ಅರ್ಧ ಸುತ್ತು ಸುತ್ತಿ ನಿಂತಿತು. ಹಿಂಬದಿಯ ಸೀಟಿನ ಬಲಭಾಗದಲ್ಲಿ ಕೂತಿದ್ದ ಡಯಾನಳ ಹೃದಯ ಒಮ್ಮೆಲೇ ಎಡದಿಂದ ಬಲಕ್ಕೆ ಚಲಿಸಿ ಬಂದು ಸ್ಥಭವಾಗಿತು.
೧:೩೫ ಕೆ ಆಂಬುಲೆನ್ಸ್ ವಾಹನ ಅಪಘಾತದ ಸ್ಥಳ ಬಿಟ್ಟು ೩.೭ ಮೈಲಿ ದೂರದ ಪಿಟಿಎ -ಸಲಪೆಟ್ರಿಯೇರೇ ಹೊರಟಿತು.
ಪ್ರಶ್ನೆ ೨ - ಆಂಬುಲೆನ್ಸ್ ಯಾಕೆ ಕೇವಲ ೧೨ ಗಂಟೆ ವೇಗದಲ್ಲಿ ಚಲಿಸುತಿತ್ತು? ಕೆಲವೊಂದು ಚಿತ್ರಗಳಲ್ಲಿ ವೈದ್ಯರು ಡಯಾನಳ ಹೃದಯವನ್ನು ಮೊತ್ಹೊಮ್ಮೆ ಕಾರ್ಯರೂಪಕ್ಕೆ ತರಲು ಸ್ಪಷ್ಟವಾಗಿ ಕಾಣಸಿಗುತದೆ.
ಪ್ರಶ್ನೆ ೩ - ಎರಡು ಆಸ್ಪತ್ರೆಗಳು ಹತ್ತಿರಲ್ಲೇ ಇದ್ದರು ಯಾಕೆ ಪಿಟಿಎ -ಸಲಪೆಟ್ರಿಯೇರೇ ಕರೆತಲಾಗಿತ್ತು?
ಕೊನೆಗೆ ವೇಲ್ಸ್ ನ ರಾಜಕುಮಾರಿ, ಸ್ಥೂರದ್ರೂಪಿ ಚಲುವೆ ಡಯಾನ ಮುಸುಕಿನ ಮುಂಜಾನೆ ೨:೩೫ ಕ್ಕೆ ಮುರಿದ ಹೃದಯದ ಕಾರಣ ಇಹಲೋಕ ತ್ಯಜಿಸಿದಳು. ಅಪಘಾತದ ಸ್ಥಳವನ್ನು ಸ್ವಲ್ಪ ಹೊತ್ತಿಗೆ ಸಾರ್ವಜನಿಕರ ಓಡಾಟಕ್ಕೆ ಅಡಿ ಮಾಡಿಕೊಡಲಾಗಿತ್ತು. ಸುರಂಗದ ಎಲ್ಲ ಕ್ಯಾಮೆರಾಗಳು ಅಪಘಾತದ ಮುಂಚಿಗಿತವಾಗಿಯೇ ಸ್ಥಬ್ದಗೊಳಿಸಲಾಗಿತ್ತು.
ಮರಣೋತ್ತರ ಪರೀಕ್ಷೆಯಲ್ಲಿ ಚಾಲಕ ಹೆನ್ರಿ ಪಾಲ್ ಅಳತೆ ಮೀರಿ ಪಾನಮತ್ತನಾಗಿದ್ದ ಎಂದು ಹೇಳಲಾಗಿದೆ. ಆದರೆ ರಿಟ್ಜ್ ಹೋಟೆಲಿನ ಸಿಸಿ ಕ್ಯಾಮೆರಾಗಳಲ್ಲಿ ಅವನು ಸಾಮಾನ್ಯನಂತೆ ನೆಡೆದು ಹೋಗುವ ದೃಶ್ಯಗಳು ಸ್ಪಷ್ಟವಾಗಿ ಕಾಣ ಸಿಗುತ್ತಗೆ. ಕೆಲವೇ ವರುಷಗಳು ರಾಣಿಯಂತೆ ಮೆರೆದರು ಜನರ ಮನದಲ್ಲಿ ಅಜರಾಮರವಾಗಿ ಉಳಿದ ರಾಜಕುಮಾರಿಗೆ ವಂದನೆ ಅರ್ಪಿಸುತ್ತ ನನ್ನ ಈ ಅಂಕಣವನ್ನು ಮುಗಿಸುತ್ತಿದ್ದೇನೆ.
ಚಿತ್ರ ಸೆಲೆ - ಗೂಗಲ್
ಮಾಹಿತಿ ಸೆಲೆ - ದಿ ಮರ್ಡರ್ ಆ ಪ್ರಿನ್ಸೆಸ್ ಡಯಾನಾ ಪುಸ್ತಕ
@Cricket_Lama

Comments
Post a Comment