ಅಭಿನವ ಭಾರತದ ಸ್ವತಂತ್ರ ವೀರ, ಅಪ್ಪ್ರಥಮ ವಾಗ್ಮಿ - ವಿನಾಯಕ್ ದಾಮೋದರ್ ಸಾವರ್ಕರ್

 ಅಪ್ಪ್ರಥಮ ವಾಗ್ಮಿ - ವಿನಾಯಕ್ ದಾಮೋದರ್ ಸಾವರ್ಕರ್


ನಾನು ನನ್ನ ಹತ್ತು ಗಳೆಯರು ಅಂಡಮಾನ್ ಗೆ  ಬಂದಾಕ್ಷಣ ಕಣ್ಣಿಗೆ ರಾಚಿದ್ದು - ವೀರ ಸಾವರ್ಕರ್ ವಿಮಾನ ನಿಲ್ದಾಣ ಎಂಬ ನಾಮ ಫಲಕ. ಗೆಳೆಯನೊಬ್ಬ ಸಾವರ್ಕರ್ ಯಾರೆಂದು ಕೇಳಿದ ತಕ್ಷಣ ನನಗೆ ಎಲ್ಲಿಲ್ಲದ ಕೋಪ ಬಂದಿತಾದರೂ ನನಗೂ ಕೆಲವೇ ವಿಷಯಗಳು ತಿಳಿದಿರುವ ಬಗ್ಗೆ ಬೇಸರವಿತ್ತು. ನನ್ನ ಕೋಪ ನನ್ನ ಬೇಸರದೊಂದಿಗೆ ರಾಜಿಯಾಗಲು ತುಂಬ ಹೊತ್ತು ಬೇಕಿರಲಿಲ್ಲ.

ಸ್ವತಂತ್ರ ಸಂಗ್ರಾಮದಲ್ಲಿ ಸರಿ ಸುಮಾರು ಐದು ಲಕ್ಷಕ್ಕೂ ಹೆಚ್ಚು ಮಂದಿ ತಮ್ಮ ಜೀವ ತೆತ್ತಿದ್ದಾರೆ. ನಾವು ಎಲ್ಲರನ್ನು ನೆನಪಿನಲ್ಲಿಡಲು ಸಾಧ್ಯವಿಲ್ಲ. ಆದರೆ ನೆನಪ್ಪಿನಲ್ಲಿ ಇಡಲೇ ಬೇಕಾದವರು ವೀರ ಸಾವರ್ಕರ್. The Unsung Hero ಎಂದರೆ ಎಂದಿಗೂ ತಪ್ಪಲಾಗಲಾರದು. ಗಾಂಧಿ, ನೆಹರು, ಬೋಸ್, ಭಗತ್ ಸಿಂಗ್, ತಿಲಕರ ಅಂಥವರ ಮಧ್ಯೆ ನಮಗೆ ಸಾವರಕರ್ ಕಾಣದೆ ಹೋಯಿತು.

ಸಾವರಕರ್ ಯಾರು?

ಮಧ್ಯ ಪ್ರದೇಶದ ನಾಸಿಕ್ ಜಿಲ್ಲೆಯ ಒಂದು ಸಣ್ಣ ಹಳ್ಳಿ ಭಾಗುರ್ ಎಂಬಲ್ಲಿ ಅವರ ಜನನವಾಯಿತು, ಭಾರತ ಮಾತೆಯ ಇಷ್ಟ ಪುತ್ರನ ಆಗಮನ. ವಿನಾಯಕ ಚಿಕ್ಕಂದಿನಿಂದಲೂ ಬ್ರಿಟಿಷರ ದಬ್ಬಾಳಿಕೆಯ ಬಗ್ಗೆ ಕೇಳಿ ರೋಸಿ ಹೋಗಿದ್ದ. ಅದರಲ್ಲೂ ರಾಂಡ್ ಎಂಬ ಬ್ರಿಟಿಷ್ ಅಧಿಕಾರಿ ಪ್ಲೇಗ್ ರೋಗವನ್ನು ದಮನ ಮಾಡುವ ಬದಲು ಇಡೀ ಊರನ್ನೇ ಸುಟ್ಟು ಭಸ್ಮ ಮಾಡಿದ. ಇದನ್ನು ನೋಡಿದ ಚಾಫೆಕರ್ ಸಹದೋರರು ಅಧಿಕಾರಿಯನ್ನು ರಕ್ತದ ಓಕುಳಿಯಲ್ಲಿ ಮಲಗಿಸಿದರು, ತದನಂತರ ಗಣೇಶ್ ಶಂಕರ್ ದ್ರವಿಡ ಎಂಬ ಮಿತ್ರ ದ್ರೋಹಿ ಬ್ರಿಟಿಷರೊಂದಿಗೆ ಕೈ ಜೋಡಿಸಿ ಚಾಫೆಕರ್ ಸಹೋದರರ ಬಂಧನಕ್ಕೆ ಕಾರಣನಾದ. ವೀರ ಯೋಧರನ್ನು ಗಲ್ಲಿಗೇರಿಸಲಾಯಿತು.

ಈ ರೀತಿಯ ಕಥೆಗಳನ್ನು ಕೇಳಿ ಬೆಳೆದ ಬಾಲಕ ವಿನಾಯಕ್ ದಾಮೋದರ್ ತನ್ನನ್ನು ಸ್ವತಂತ್ರ ದೇವಿಗೆ ಅರ್ಪಿಸಲು ಸನ್ನದನಾದ. ಸಾವರ್ಕರ್ ಅವರು ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿ ತದನಂತರ ಉನ್ನತ ವ್ಯಾಸಂಗಕ್ಕೆ ಇಂಗ್ಲೆಂಡ್ ಗೆ ಪಯಣ  ಬೆಳಸಿ ಶ್ಯಾಮಜಿ ಕೃಷ್ಣ ವರ್ಮಾ ನಿರ್ಮಿಸಿದ ಭಾರತ ಭವನದಲ್ಲಿ ತಮ್ಮ ಕ್ರಾಂತಿ ಕಾರಿ  ಯೋಜನಗಳನ್ನು ಒಂದೊಂದಾಗಿ ಕಾರ್ಯರೂಪಕ್ಕೆ ತರುವಲ್ಲಿ ಯಶಸ್ವಿ ಆದರು. ಲಂಡನ್ ಪುಸ್ತಕ ಗ್ರಂಥಾಲಯವನ್ನು ಸದುಪಯೋಗ ಪಡಿಸಿಕೊಂಡು 1857 ರ ಮಹಾ ದಂಗೆಯ ಸಂಪೂರ್ಣ ವರದಿಯನ್ನು ಒಂದು ಪುಸಕ್ತದ ರೀತಿಯಲ್ಲಿ ಪ್ರಕಟಿಸಿದರು. ಅದು ಆ ಕಾಲಕ್ಕೆ ಮಹಾ ಗ್ರಂಥ ವೆಂದರೆ ತಪ್ಪಲ್ಲ. ಅದುವೇ ದಿ ಇಂಡಿಯನ್ ವಾರ್ ಆಫ್ ಇಂಡಿಪೆಂಡೆನ್ಸ್ ( The  Indian  War of Independence ).  ಮಹಾರಾಷ್ಟ್ರದ ಪ್ರತಿ ಯುವಕನ ಕೈಯಲ್ಲಿ ಪುಸ್ತಕ ರಾರಾಜಿಸಿತು. ಬ್ರಿಟಿಷರ ತಲೆ ಬಿಸಿಯಾಯಿತು. ಅಲ್ಲಿವರೆಗೂ ಬ್ರಿಟಿಷರು ಭಾರತೀಯರನ್ನು ಸೋಲಿಸಿ ಗೆದ್ದರು ಎಂದು ಭಾವಿಸಿದ ಇಂಗ್ಲೆಂಡ್ ಪ್ರಜೆಗಳಿಗೆ ಈ ಪುಸ್ತಕ ಸತ್ಯ ಘಟನೆಗಳನ್ನು ಎಳೆ ಎಳೆಯಾಗಿ ವಿವಿರಿಸುತ್ತಾ ಹೋಯಿತು. ಮೋಸ ವಂಚನೆ ಇಂದ ಕೂಡಿದ ಒಂದು ಸಂಗ್ರಾಮವನ್ನು ಸ್ವತಃ ಬ್ರಿಟನ್ ಪ್ರಜೆಗಳೇ ಬ್ರಿಟಿಷ್ ಆಡಳಿತವನ್ನು ಹೀಯಾಳಿಸಿದರು. ಅಂತೆಯೇ ಅವರ ಮಗದೊಂದು ಪುಸ್ತಕ ಪ್ರಕಟಣೆಗೆ ಅವಕಾಶವೇ ಕೊಡಲಿಲ್ಲ. ಎಲ್ಲೂ, ಯಾವ ಮುದ್ರಣಾಲಯವು ಪುಸ್ತಕ ಮುದ್ರಣಕ್ಕೆ ಮುಂದಾಗಲಿಲ್ಲ. ಅಂತೆಯೇ ಹಾಲೆಂಡ್ ನ ಒಂದು ಮುದ್ರಣಾಲಯದಲ್ಲಿ ಗೌಪ್ಯವಾಗಿ ಮುದ್ರಿಸಿ ಭಾರತಕ್ಕೆ ಕಳುಹಿಸಲಾಯಿತು. ಅದುವೇ  Indian rebellion of 1857 . ಅದು ಬಿಡುಗಡೆಗೆ ಮುನ್ನವೇ ಎರಡು ದೇಶಗಲ್ಲಿ ನಿಷೇದವಾಯಿತು.


 ಶ್ಯಾಮ್ ಜಿ ಅವರ ಭವನದಲ್ಲಿ ಎಲ್ಲ ಭಾರತೀಯರನ್ನು ಸೇರಿಸಿ ಮಿತ್ರ ಮೇಳವನ್ನು ಸ್ಥಾಪಿಸಿದರು. ಅಲ್ಲಿವರೆಗೆ ಅಲ್ಲೇ ನೆಲೆಸಿದ್ದ, ಅಸಡ್ಡೆ ಭಾರತೀಯರನ್ನ ಒಗ್ಗೂಡಿಸುವಲ್ಲಿ ಯಶಸ್ವಿಯಾದರು. ಅವರ ಭಾಷಣ ಕೇಳಲು ಸ್ವತಃ ಗಾಂಧೀಜಿ ಬರುತ್ತಿದ್ದರು ಎಂದು ಹಲವೆಡೆ ಉಲ್ಲೇಖಿಸಲಾಗಿದೆ.
1905ರಲ್ಲಿ ಲಾರ್ಡ್ ಕಝೋನ್ (Lord Curzon) ನೇತೃತ್ವದಲ್ಲಿ ಬಂಗಾಳ ವಿಭಜನೆಯಾದಾಗ ಅದನ್ನು ಪ್ರತಿಭಟಿಸಲೆಂದೇ ತಿಲಕರ ಆದರ್ಶದಂತೆ  ಬ್ರಿಟಿಷ್ ವಸ್ತ್ರಗಳ ಮಾರಣ ಹೋಮ ನೆಡಿಸಲಾಯಿತ್ತು. ಯಾರೊಬ್ಬರೂ ಆಂಗ್ಲ ಉಡುಪುಗಳನ್ನು ತೊಡದಂತೆ ಶಪಥ ಮಾಡಿದರು. ಸಾವರಕರ್ ಅವರ ಮಾತು, ಭಾಷಣ ಯಾವ ಮಟ್ಟಿಗೆ ತೀಕ್ಷ್ಣವಾಗಿತ್ತು ಎಂದರೆ ಆಬಾ ಪಾಂಗಲೇ ಎಂಬ ಪೋಲಿ ಗೀತೆ ರಚನೆಕಾರನನ್ನು ಪ್ರೇರೇಪಿಸಿ ರಾಷ್ಟ್ರ ಪ್ರೇಮದ ಕವಿತೆಗಳನ್ನ ಬರೆಯುವುದಕ್ಕೆ ಶುರು ಮಾಡಿದ. ಮುಂದೆ ಅದೇ ಪಾಂಗಲೇ "ಸ್ವತಂತ್ರ ಕವಿ" ಗೋವಿಂದ ಪರಿಕರ್ ಎಂದೇ ಪ್ರಖ್ಯಾತಿಯಾದ. 
1905 ರಲ್ಲಿ ಭಾರತದಲ್ಲಿ ಮಾಡಿದ ಭಾಷಣಕ್ಕೆ 1910 ಮಾರ್ಚ್ 13  ರಂದು ಲಂಡನ್ ರೈಲ್ವೆ ನಿಲ್ದಾಣದಲ್ಲಿ ಅವರನ್ನು ಬಂಧಿಸಲಾಯಿತು. ಆದರೆ ಅವರ ವಿಚಾರಣೆ ಭಾರತದಲ್ಲಿ ನೆಡೆಯಬೇಕು ಎಂಬ ಕಟ್ಟಪ್ಪಣೆಯಾಗಿತ್ತು. ಏತನ್ಮದ್ಯೆ ಲಂಡನ್ ಕಾರಾಗೃಹದಲ್ಲಿ ಸಾವರ್ಕರ್ ಅವರನ್ನ ಭೇಟಿ ಮಾಡಲೆಂದು ಬಂದ ಸ್ನೇಹಿತನಿಗೆ - "ನಿನ್ನನ್ನು ಮಾರ್ರ್ಸಿಲ್ಲಿಯಲ್ಲಿ  ಭೇಟಿ ಮಾಡುವೆ" ಎಂದು ಒಂದು ಸಣ್ಣ ಸುಳಿವನ್ನು ಕೊಟ್ಟಿದ್ದರು.
ಇದರ ತಾತ್ಪರ್ಯವನ್ನರಿತ ಗೆಳೆಯ, ಸಾವರ್ಕರ್ ಮಾರ್ರ್ಸಿಲ್ಲಿ ಹತ್ತಿರ ಹಡಗಿನಿಂದ ಪಾರಾಗುವರು ಎಂದು ಸುಳಿವಿನ ಸೂಕ್ಷ್ಮ ಅರಿತರು. ಒಬ್ಬ ಚಾಣಾಕ್ಷ ಕ್ರಾಂತಿಕಾರಿಯನ್ನು ಹೊತ್ತು ಹೋಗುತಿರುವ ಹಡುಗು ಎಲ್ಲೂ ನಿಲ್ಲಬಾರದೆಂದು ಆದೇಶವಾಗಿತ್ತು. ವಿಪರ್ಯಾಸವಂತೆ ಮಾರ್ರ್ಸಿಲ್ಲಿ ಬಳಿಯೇ ಕೆಟ್ಟಿ ನಿಂತಿತು. ಹಡಗಿನ ಶೌಚಾಲಯದಲ್ಲಿ ಒಂದು ಸಣ್ಣದ ಕಿಂಡಿಯನ್ನು ಕಂಡು ಅವರಿಗೆ ಎಲ್ಲಿಲ್ಲದ ಸಂತೋಷ, ಆದರೆ ದೇಹ ಹೊಕ್ಕುವಷ್ಟು ದೊಡ್ಡದಾಗಿರಲಿಲ್ಲ.
ಸಾವರಕರ್ ಎಂಥ ಅಪ್ಪ್ರತಿಮ ಛಲಗಾರ ಎಂದು ಮಗದೊಮ್ಮೆ ಸಾಬೀತು ಪಡಿಸಿದರು.  ಪ್ರಾಣಾಯಾಮದ ಮೂಲಕ ತಮ್ಮ ದೇಹವನ್ನು ಕುಗ್ಗಿಸಿ, ಸ್ವತಂತ್ರ ಲಕ್ಷ್ಮಿ ಕಿ ಜೈ ಎಂದು ಕೂಗುತ್ತಾ ಸಣ್ಣ ಕಿಂಡಿ ಇಂದ ಸಾಗರಕ್ಕೆ ದುಮಿಕಿದರು. ಇದನ್ನು ಗಮನಿಸಿದ ಪೊಲೀಸರು ಅವಕ್ಕಾಗಿ ಬೆಂಬಿಡದಂತೆ ಹಿಂಬಾಲಿಸಿದರು. ಸಾಗರವನ್ನು ಈಜಿ ದಾಟಿ ಕೊನೆಗೂ ಫ್ರಾನ್ಸ್ ತಲುಪಿತಾದರೂ ಪೊಲೀಸರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಭಾರತದ ನ್ಯಾಯಾಲಯದಲ್ಲಿ ಆವರಿಗೆ ಐವತ್ತು ವರುಷಗಳ ಶಿಕ್ಷೆ ವಿಧಿಸಲಾಯಿತ್ತು..

ಅಂಡಮಾನಿನ ಕಾಲ್ ಪಾನಿ ಕಾರಾಗೃಹ ಸಾಮಾನ್ಯವಾದ ಕಾರಾಗೃಹವಾಗಿರಲಿಲ್ಲ. ಭಾರತದ ಕ್ರಾಂತಿಕಾರಿಗಳನ್ನು, ಖೈದಿಗಳನ್ನು ಶಿಕ್ಷಿಸಲೆಂದೇ ಇದ್ದ ಒಂದು ನರಕ. ಸ್ವಲ್ಪ ಶಿಸ್ತು ತಪ್ಪಿದರು ಜೈಲಿನಲ್ಲಿ ನೇತು ಹಾಕಿದ್ದ ಕೊಳಗಳಿಗೆ ಆತುಕೊಂಡು ರಾತ್ರಿ ಇಡೀ ನಿಂತಿರ ಬೇಕಿದ್ದ ಶಿಕ್ಷೆ. ಕೋಣೆಯೊಳಗೆ ಮಲ ಮೂತ್ರ ವಿಸರ್ಜನೆ. ತೆಂಗನ್ನು ಸುಲಿದು ಅದರ ನಾರಿನಿಂದ ಹಗ್ಗ ಹೊಸೆಯುವ ಕೆಲಸ. ಅದು ಸಾಲದಂತೆ ಗಾಣದೆತ್ತಿನ ಜಾಗದಲ್ಲಿ ಬಂಧಿತರನ್ನು ಹೂಡಿ ಎಣ್ಣೆ ತೆಗೆಯುವ ಕ್ರೂರ ವಿಕೃತ ಶಿಕ್ಷೆ.

ಸಾವರ್ಕರ್ರನ್ನು ಅಂಡಮಾನಿನ ಕಾಲ್ ಪಾನಿ ಕಾರಾಗೃಹಕ್ಕೆ ಬಂದಾಕ್ಷಣ ಅಲ್ಲಿನ ಅಧಿಕಾರಿ ಬ್ಯಾರಿ ಸವಾರಕಾರರನ್ನುದ್ದೇಶಿಸಿ ಕೇವಲ ಐವತ್ತು ವರುಷ ಅಷ್ಟೇ, ಆಮೇಲೆ ನಿಮ್ಮನ್ನು ಬಿಟ್ಟು ಬಿಡುತ್ಹ್ಹರೆ ಎಂದು ತುಚ್ಛವಾಗಿ ಅವಮಾನಿಸಿದ. ಆದರೆ ಅದಕೆಲ್ಲ ಹೆದರಿ ಶರಣಾಗುವ ಆಸಾಮಿ ಅವರಾಗಿರಲಿಲ್ಲ. ಜೈಲಿನಲ್ಲಿ ಸುಧಾರಣೆಗೋಸ್ಕರ ಸಾವರ್ಕರ್ ಪ್ರತಿಭಟನೆ ನೆಡೆಸಿದರು. ಬ್ರಿಟಿಷ್ ಸರ್ಕಾರವು ಖೈದಿಗಳ ಜೀವನ ಶೈಲಿಯಲ್ಲಿ ಹಾಗು ಶಿಕ್ಷೆಯಲ್ಲಿ ಸಾಕಷ್ಟು ಬದಲಾವಣೆಯನ್ನು ತರಲಾಗಿತ್ತು.



ಕಬ್ಬಿಣದ ತುಡುನೊಂದನ್ನು ಸಂಪಾದಿಸಿದ ಸಾವರಕರ್, ಜೈಲಿನ ಗೋಡೆಮೇಲೆ 14000 ಸಾಲುಗಳ "ಕಮಲ" ಎಂಬ ಬೃಹತ್ ಕಾವ್ಯವನ್ನು ರಚಿಸಿದಿರಲ್ಲದೆ ಅಂಡನ್ನು ಕಂಠಪಾಠ ಮಾಡಿ ಬಿಡುಗಡೆಯಾದ ನಂತರ ಅದನ್ನು ಪ್ರಕಟಿಸಿ ಮಹಾನ್ ಕವಿಯಾದರು.

ಇತ್ತ ಭಾರತದಲ್ಲಿ ಸಾವರ್ಕರ್ ಅವರ ಬಿಡುಗಡೆಗೆ ಎಲ್ಲಿಲ್ಲದ ಆಂದೋಲನ ಪ್ರಾರಂಭವಾಯಿತು. ಲಕ್ಷ ಲಕ್ಷ ಸಹಿಗಳು ಸಂಗ್ರಹವಾದವು. ಬ್ರಿಟಿಷರು ಒತ್ತಡಕ್ಕೆ ಮಣಿದು 1921 ರಲ್ಲಿ ವಿನಾಯಕ್ ಸಾವರಕರ್ ಅವರನ್ನು ಬಿಡುಗಡೆ ಗೊಳಿಸಿದರು.

ಭಾರತಕ್ಕೆ ಬಂದಾಕ್ಷಣ ಜಾತಿ ಮತಗಳ ವಿರುದ್ಧ ಹೋರಾಟ ನೆಡೆಸಿ, ಕೆಳ ವರ್ಗದ ಜನರಿಂದ, ಜನರಿಗೋಸ್ಕರ ದೇವಸ್ಥಾನವನ್ನು ಕಟ್ಟಿಸಿದರು. ಶುಭಾಷ್ ಚಂದ್ರ ಬೋಸರಿಗೆ ವಿದೇಶದಲ್ಲಿ ಸೇನೆ ಕಟ್ಟುವ ಸಲಹೆ ನೀಡಿದರು. ಇಷ್ಟೆಲ್ಲಾ ಮಾಡಿದ ಸಾವರ್ಕರ್ ಅವರನ್ನು ತೀರಾ ಕೆಟ್ಟದಾಗಿ ನಮ್ಮ ಸರ್ಕಾರವೇ ನೆಡೆಸಿಕೊಂಡಿತ್ತು. ಪಾಕಿಸ್ತಾನದ Liaquat Ali Khan  ಭಾರತಕ್ಕೆ ಭೇಟಿ ನೀಡಿದಾಗ ಅವರನ್ನು ಬಂಧಿಸಿ  ವಿಕೃತ ಮನಸ್ಥಿತಿಯನ್ನು ಪ್ರದರ್ಶಿಸಲಾಗಿತ್ತು.

ಇದೆಲ್ಲ ನೋಡಿ ಬೇಸತ್ತು, 83 ವರುಷಗಳ ತುಂಬು ಜೀವನ ನೆಡಿಸಿದ ಸಾವರ್ಕರ್ ಒಂದೊಮ್ಮೆ ಸಮುದ್ರದಲ್ಲಿ ಲೀನವಾಗಲು ವಿಫಲ ಯತ್ನ ನೆಡೆಸಿದರು.ಕೊನೆಗೆ 21 ದಿನಗಳ ಉಪವಾಸದಿಂದ ದೇಹತ್ಯಾಗ ಮಾಡಿ ಇಚ್ಚಾ ಮರಣಿ ಎನಿಸಿಕೊಂಡರು. ಅಪ್ಪಟ ದೇಶ ಪ್ರೇಮಿ, ತನ್ನ ಯೌವನ್ನವನ್ನು, ಬುದ್ದಿ ಶಕ್ತಿಯನ್ನು ದೇಶಕರ್ಪಿಸಿದ ಮಹಾನ್ ಚೇತನ ಕೊನೆಯ ಬಾರಿಗೆ  ಕಣ್ಣ್ ಮುಚ್ಚಿತ್ತು. 


ಅವರ ಸಾವಿನ ನಂತರವೂ ಸರಕಾರ ವಿಲಕ್ಷಣ ರೀತಿಯಲ್ಲಿ ನೆಡೆದುಕೊಂಡಿತ್ತು. ಸಾವರಕರ್ ಅವರಿಗೆ ಗೌರವಾರ್ಪಣೆ ನೀಡಬೇಕೆಂದು ಪ್ರಸ್ತಾಪಿಸಿದಾಗ, ಆಗಿನ ಸಭಾಧ್ಯಕ್ಷರಾಗಿದ್ದ ಕಾಂಗ್ರೆಸ್ಸಿನ ಸರ್ದಾರ್ ಹುಕಮ್ ಸಿಂಗ್ "ಅವರೇನು ಲೋಕ ಸಭಾ ಸದಸ್ಯರಲ್ಲ" ಎಂಬ ಉಡಾಫೆ ಉತ್ತರ ನೀಡಿದರು. ಆದರೆ ನಮ್ಮ ಲೋಕ ಸಭೆ ಮಾತ್ರ ಸಂಸದರಲ್ಲದ ಗಾಂಧೀಜಿ ಅವರಿಗೆ, ವಿದೇಶದ ಸ್ಟಾಲಿನ್ ಅವರಿಗೆ ಗೌರವಾರ್ಪಣೆ ಮಾಡಿತ್ತು ಎಂಬುದು ಯಾರು ಮರೆತಿಲ್ಲ.

1757 Battle of Plassey ಇಂದ ೧೯೪೭ವರೆಗೂ ಯಾವೊಬ್ಬ  ಸ್ವತಂತ್ರ ಹೋರಾಟಗಾರರಿಗೂ " ಸ್ವತಂತ್ರ ವೀರ" ಎಂಬ ಬಿರುದನ್ನೂ ಕೊಟ್ಟಿರಲಿಲ್ಲ. ಅದು ದೊರೆತ್ತಿದ್ದು ವಿನಾಯಕ್ ದಾಮೋದರ್ ಸಾವರ್ಕರ್ ಅವರಿಗೆ ಮಾತ್ರ. ಇದೆ ತಿಂಗಳು ೨೮ಕ್ಕೆ ಅವರ ೧೩೪ನೆ ಜನ್ಮ ಜಯಂತಿ. ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸುತ್ತಾ ನನ್ನ ಈ ಅಂಕಣವನ್ನು ಮುಗಿಸುತ್ತಿದ್ದೇನೆ.

ಚಿತ್ರ ಸೆಲೆ - ಗೂಗಲ್
ರಚನೆ - ತಿಲಕ್ 
@Cricket_Lama

Comments