ವೆಸ್ಟ್ ಇಂಡೀಸ್ ಎಂಬ ದೈತ್ಯ ನೆಲ ಕಚ್ಚಿದಾಗ
Carlos Brathwaite, Remember the name ಎಂದು ಉದ್ವೇಗದಲ್ಲಿ,
ಸಂತೋಷದಲ್ಲಿ, ಕಿಚ್ಚಿನಲ್ಲಿ ಬಿಷಪ್ ಆಡಿದ ಮಾತು ಇನ್ನು ನೆನಪಿದೆ.
ಬೆನ್ ಸ್ಟೋಕ್ಸ್ ಎಸೆದ ಕೊನೆಯ ಒವೆರಿನಲ್ಲಿ
ಮನಸ್ಸೋ ಇಚ್ಚ್ಚೆ ಚೆಂಡನ್ನು ಬೌಂಡರಿ
ಆಚೆ ರವಾನಿಸಿದ ಮೇಲೆ ವೆಸ್ಟ್ ಇಂಡೀಸ್
೨೦೧೬ರ ವಿಶ್ವ ಕಪ್ ಗೆದ್ದಿತ್ತು,
ಅದು ಎರಡನೇ ಬಾರಿಗೆ. ಆ
ಕ್ಷಣಕ್ಕೆ ನನಗೆ ವ್ಯಯಕ್ತಿಕವಾಗಿ ವೆಸ್ಟ್
ಇಂಡೀಸ್ ನ ಗತವೈಭವ ಮರುಕಳುಹಿಸಿತೇನೋ
ಎಂದು ಭಾಸವಾಹಿತು ಆದರೆ ವಿಧಿ ಭ್ರಮೆ
ಹುಟ್ಟಿಸಿತ್ತು ಎಂದು ತಿಳಿಯಲು ತುಂಬ
ಸಮಯ ಬೇಕಿರಲಿಲ್ಲ.
ಆ ಕಾಲದ ಬೌಲರ್ ಗಳಾದ ಕಾಲಿನ್
ಕ್ರಾಫ್ಟ್, ಮಾಲ್ಕಮ್ ಮಾರ್ಷಲ್, ಬಿಗ್
ಬರ್ಡ್ - ಜೋಯೆಲ್ ಗಾರ್ನರ್, ಆಂಡಿ
ರೊಬೆರ್ಟ್ಸ್, ಮೈಕಲ್ ಹೋಲ್ಡಿಂಗ್ ಅಂತ
ಘಟಾನು ಘಟಿಗಳು ಎದುರಾಳಿಯಲ್ಲಿ ನಡುಕ
ಹುಟ್ಟಿಸುತ್ತಿದ್ದರು. ಅದರಲ್ಲೂ ೫'೭
ಎತ್ತರದ ಮಾಲ್ಕಮ್ ಮಾರ್ಷಲ್ ಅವರ
ಸರಾಸರಿ ಕೇವಲ ೨೦ ಎಂದರೆ
ನಂಬಲಸಾಧ್ಯ. ಇನ್ನು ಬ್ಯಾಟಿಂಗ್ ವಿಚಾರಕ್ಕೆ
ಬಂದರೆ ಸರ್ ವಿವಿ ರಿಚರ್ಡ್ಸ್,
ಡೆಸ್ಮಂಡ್ ಹಯ್ನ್ಸ್, ಕಲ್ಲಿಚರ್ರಾನ್, ಲ್ಲೊಯ್ಡ್ ನಂತರ ಕ್ರಿಕೆಟ್ ಲೋಕದ
ಅಸಮಾನ್ಯ ದೊರೆ ಬ್ರಿಯಾನ್ ಚಾರ್ಲ್ಸ್
ಲಾರಾ ಈ ಪಟ್ಟಿಗೆ ಕೊನೆಯೇ
ಇಲ್ಲವಂತೆ ಬೆಳೆಯುತ್ತಾ ಹೋಗುವುದು. ಈ ತಂಡ ೧೯೭೫ ಹಾಗು ೭೯ರ
ವಿಶ್ವ ಕಪ್ ತನ್ನ ತೆಕ್ಕೆಗೆ
ಹಾಕಿಕೊಂಡಿತ್ತು.
ವಿಂಡೀಸ್
ನ ಇತಿಹಾಸ ತಿರುವಿ
ನೋಡಿದಾಗ ೧೯೭೫ರಿಂದ ೧೯೯೫ರವರೆಗೆ ಅವರು ಆಡಿದ ೧೫೨
ಪಂದ್ಯಗಳಲ್ಲಿ 72 ಗೆದ್ದು ಕೇವಲ 25ರಲ್ಲಿ
ಪರಾಭವಗೊಂಡಿತ್ತು. ಇದು ಅವರ ಪ್ರಾಬಲ್ಯಕ್ಕೆ
ಎತ್ತಿ ಹಿಡಿದ ಕನ್ನಡಿ.ನಂತರ
ನೆಡೆದ, ಆಡಿದ, ನೋಡಿದ ಎಲ್ಲಾ
ಪಂದ್ಯಗಳು ವಿಂಡೀಸ್ ಒಂದು ಕ್ರಿಕೆಟ್
ಪ್ರಪಂಚದ ಕೂಸೆನಿಸಿತು. ೧೯೯೫ರಿಂದ ಇಲ್ಲಿಯವರೆಗೆ ಆಡಿದ ೨೧೭ ಟೆಸ್ಟ್
ಪಂದ್ಯ ಗಳಲ್ಲಿ ಕೇವಲ ೪೪ರಲ್ಲಿ
ಜಯ ಹಾಗು ೧೦೮ ರಲ್ಲಿ
ಪರಾಭವ.
೨೦೧೪ರ ಭಾರತ ಪ್ರವಾಸವನ್ನು
ಅರ್ಧಕ್ಕೆ ಮೊಟಕುಗೊಳಿಸಿ ಇಡೀ ತಂಡವೇ ತೆವರಿಗೆ
ಹಿಂತಿರುಗಿತು. ಆರ್ಥಿಕವಾಗಿ ಕ್ರಿಕೆಟ್ ಸಂಸ್ಥೆ ಕೂಗಿರಬಹುದು ಆದರೆ ಇಡೀ ಕ್ರಿಕೆಟ್ ಲೋಕವೇ ಬೆರಗಾಗಿಸುವ ಹಾಗೆ ಸರಣಿಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಹಿಂತಿರುಗಿದ್ದು WICB ಯನ್ನು ಕೆಂಡಾಮಂಡಲವಾಗಿಸಿತ್ತು. ಇನ್ನು WICB ರಾಜಕೀಯ ಹಸ್ತಕ್ಷೇಪಕ್ಕೆ
ಹಿಡಿದ ಕನ್ನಡಿಯೆಂದರೆ ತಪ್ಪಲ್ಲ. ಈ ವರುಷ ನೆಡೆಯುವ
ಚಾಂಪಿಯನ್ಸ್ ಟ್ರೋಫಿ ಇಂದ ವಿಂಡೀಸ್
ಹೊರಗುಳಿಯ ಬೇಕಾಗುತ್ತದೆ, ಇದಕ್ಕೆ ಕಾರಣ ICC ಶ್ರೇಯಾಂಕದಲ್ಲಿ
ಅದು ತೀರಾ ಕೆಳಮಟ್ಟದಲ್ಲಿದೆ.
೧೯೭೫ರಿಂದ
೧೯೯೫ರವರೆಗೆ ಒಂದು ಸರಣಿಯನ್ನು ಸೋಲದ
ವೆಸ್ಟ್ ಇಂಡೀಸ್ ಇಂದು ನೆಲ
ಕಚ್ಚಿದೆ. ಕಾರಣ? ರಾಜಕೀಯವಾಗಿ, ವ್ಯಕ್ತಿಕವಾಗಿ
ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್
( WICB ) ಸಹ ಕಾರಣ ಎಂದರೆ ಅದು
ಅತಿಶಯೋಕ್ತಿಯಲ್ಲ. ಇನ್ನು ಹಲವಾರು ಕಾರಣಗಳಿದ್ದರೂ
ಸಹ ಇದು ನಮಗೆ ಪ್ರಮುಖವಾಗಿ
ಕಾಣುವ ಅತಿ ದೊಡ್ಡ ಸಮಮಸ್ಯೆ.
ಉದಾಹರಣೆಗೆ - ವಿಂಡೀಸ್ ನ ದಂತಕಥೆ
ಶಿವ್ ಚಂದೆರ್ ಪಾಲ್ ರನ್ನು
ಟೆಸ್ಟ್ ತಂಡದಿಂದ ಕೈ ಬಿಟ್ಟ
ಮೇಲೆ ಮನನೊಂದು ಟೆಸ್ಟ್ ಕ್ರಿಕೆಟ್
ಗೆ ವಿದಾಯ ಹೇಳಿದರು.
ಭಾರತದ ಫ್ಯಾಬ್ ಫೋರ್
- ಸಚಿನ್, ಗಂಗೂಲಿ, ದ್ರಾವಿಡ್ ಹಾಗು
ಲಕ್ಷ್ಮಣ್ ಅವರ ನಿವೃತ್ತಿ ಬಗ್ಗೆ
ಪತ್ರಕರ್ತರು, ಕ್ರಿಕೆಟ್ ಬುದ್ದಿಜೀವಿಗಳು ಪ್ರಶ್ನಿಸುತಿರುವಾಗ, ಬ್ರಿಯಾನ್ ಲಾರಾ - ಎಲ್ಲರೂ ತಾಳ್ಮೆಯಿಂದಿರಿ,
ಇವರು ಒಟ್ಟಿಗೆ ನಿವೃತ್ತರಾದರೆ ಭಾರತ
ಸಹ ವಿಂಡೀಸ್ ತಂಡದಂತೆ ಆಗುವುದರಲ್ಲಿ
ಸಂದೇಹವಿಲ್ಲ ಎಂದಿದ್ದರು.
ಕ್ರೀಡೆ,
ಚಿತ್ರ ರಂಗ ಯಾವುದೇ ಕ್ಷೇತ್ರದಲ್ಲೂ
ರಾಜಕೀಯ ಹಸ್ತಕ್ಷೇಪ ಇದ್ದೆ ಇರುತ್ತದೆ ಆದರೆ
ಅದು ಯಾವ ಪ್ರಮಾಣದಲ್ಲಿ ಇರಬೇಕು
ಅನ್ನುವುದು ಆಯಾ ಸಂಸ್ಥೆಗಳಿಗೆ ಬಿಟ್ಟದ್ದು.
ಅತಿಯಾದ ಹಸ್ತಕ್ಷೇಪ ಪತನಕ್ಕೆ ದಾರಿ ಎನ್ನುವುದಕ್ಕೆ
ವೆಸ್ಟ್ ಇಂಡೀಸ್ ಕ್ರಿಕೆಟ್ ಲೋಕವೇ ಒಂದು ಶ್ರೇಷ್ಠ ಉದಾಹರಣೆ. ಒಂದು ಮರದ ಬುಡ ಸರಿ ಇಲ್ಲದಿದ್ದರೆ, ಇಡೀ ಮರವೇ ಮುಗಿಚಿ ಬೀಳುವುದರಲ್ಲಿ ಸಂದೇಹವಿಲ್ಲ. ಆಟಗಾರರ ಕ್ರಿಕೆಟ್ ಬೋರ್ಡ್ ಕಡೆಗಿನ ಅಸಡ್ಡೆ, ಸೂಪರ್-೫೦ ಟೂರ್ನಮೆಂಟ್ ಅನ್ನು ದಿಕ್ಕರಿಸಿ ಹೊರದೇಶದ ಫ್ರಾಂಚೈಸಿಗಳಿಗೆ ಆಡಿದ್ದು WICB ಯನ್ನು ಇನ್ನಷ್ಟು ಕೆರಳುವತೆ ಮಾಡಿತ್ತು.
ಅವೆಲ್ಲ
ಏನೆ ಇರಲಿ, ನಾವು ನೋಡ
ಬಯಸುವ ವಿಂಡೀಸ್ ತಂಡ ಇದಲ್ಲ.
ಸುಮಾರು ದ್ವೀಪಗ ಸಮೂಹ ವೆಸ್ಟ್
ಇಂಡೀಸ್. ಆಟಗಾರವು ಎಲ್ಲ ದ್ವೀಪಗಳಿಂದ
ಒಗ್ಗೂಡಿ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಆಗುತ್ತಾರೆ.
ಆಟಗಾರರ ನಡುವೆ ಸಾಮಾನ್ಯವಾಗಿ ಸಮನ್ವಯ
ಕಡಿಮೆ. ಕ್ರಿಕೆಟ್ ಈ ಭಾಗದಲ್ಲಿ ತನ್ನ ರೋಚಕತೆ ಕಳೆದುಕೊಳ್ಳುತ್ತಿದೆ. ಅದರಂತೆಯೇ ಅಲ್ಲಿನ ಯುವಕರ ಒಲವು
ಸಹ ಬ್ಯಾಸ್ಕೆಟ್ಬಾಲ್
ಕಡೆ ತಿರುಗೆದೆ ಅಂದರೆ ತಪ್ಪಲ್ಲ. ಅವರ
ದೌರ್ಬಲ್ಯ ಕೇವಲ ಟೆಸ್ಟ್ ಕ್ರಿಕೆಟ್
ಅಲ್ಲದೆ ಅದರ ಒಂದು ದಿನದ
ಕ್ರಿಕೆಟಿನಲ್ಲೂ ಕಂಡು ಬರುತ್ತಿರುವುದು ಒಂದು
ವಿಪರ್ಯಾಸವೇ ಸರಿ. ಈ ಕಾರಣಗಳಿಗೆ
ವಿಂಡೀಸ್ ತಂಡ ಟಿ೨೦ ಕಡೆ
ತನ್ನ ಗಮನ ಹರಿಸಿ ಎರಡು
ಚುಟುಕು ಕ್ರಿಕೆಟ್ ನ ವಿಶ್ವ ಕಪ್
ಗೆದ್ದು ಕೊಂಡಿತ್ತು. ಇದಕ್ಕೆ ಕಾರಣ ತಂಡದ ಪ್ರಮುಖ ಆಟಗಾರರು ಹೊರದೇಶದ ಫ್ರಾಂಚೈಸಿಗಳಿಗೆ ಆಡಿದ ಅನುಭವ ಇಲ್ಲಿ ಸಾಕಾರ ಗೊಂಡಿತ್ತು. ಇಂದಿನಿಂದ ಪ್ರಾರಂಭವಾಗುವ ಪಾಕಿಸ್ತಾನ ವಿರುದ್ದದ ಸರಣಿಗೆ ಶುಭ ಕೋರುತ್ತಾ, ಆಟಗಾರರು ಹಾಗು ಕ್ರಿಕೆಟ್ ಸಂಸ್ಥೆಯ ನಡುವೆ ಸಮನ್ವಯ ಬೆಳೆಯಲ್ಲಿ ಎಂದು ಆಶಿಸುತ್ತಾ, ವಿಂಡೀಸ್ ನ ಗತವ್ಯಭವ ಮರುಕಳಿಸಲಿ ಎಂದು ಪ್ರಾಥಿಸುತ್ತಾ ನನ್ನ ಈ ಚುಟುಕು ಅಂಕಣಕ್ಕೆ ಇತಿಶ್ರೀ ಹಾಡುತಿರುವೆ.
ಚಿತ್ರ ಸೆಲೆ - ಗೂಗಲ್
ಮಾಹಿತಿ ಹಾಗು ಅಂಕಿ ಅಂಶ ಸೆಲೆ - ಕ್ರಿಕ್ ಇನ್ಫೋ
ರಚನೆ - ತಿಲಕ್
@Cricket_Lama




Comments
Post a Comment