ಜೀವದಲ್ಲಿ ಕರಗಿ, ಭಾವದಲ್ಲಿ ಬೆರೆತ ಪುರುಷ ಸರಸ್ವತಿಯಾ ಒಂದು ಮೆಲುಕು – ಡಾ|| ರಾಜ್
ಅದು ೧೯೭೦ರ ಕಾಲ,
ಕನ್ನಡಕ್ಕೆ ಸಿಗಬೇಕಾಗಿದ್ದ ಸ್ಥಾನ-ಮಾನಕ್ಕೆ ನಮ್ಮ ಕವಿಗಳು ಶತ ಪ್ರಯತ್ನ ನೆಡೆಸುತ್ತಿದ್ದ ಸಮಯ. ಅಲ್ಲಿಯವರೆಗೂ
ಗೋಕಾಕ್ ಹೋರಾಟ ಕೇವಲ ವಿಫಲ ಪ್ರಯತ್ನವಾಗಿತ್ತು, ಆ ವೇಳೆಗಾಗಲೇ ಕನ್ನಡಿಗರ ಹೃದಯ ಸಿಂಹಾಸನಾಧೀಶ್ವರರಾಗಿದ್ದ
ಡಾ|| ರಾಜ್ ಅವರ ಬಳಿ ಬಂದ ಪಾಟೀಲ್ ಪುಟ್ಟಪ್ಪ ಹಾಗು ಅವರ ಸಂಗಡಿಗರು, ಗೋಕಾಕ್ ಹೋರಾಟದಲ್ಲಿ ಭಾಗವಿಸುವಂತೆ
ಕೇಳಿಕೊಂಡರು. ಮದರಾಸಿನಲ್ಲಿ ವಾಸವಾಗಿದ್ದ ಡಾ|| ರಾಜ್ ಮರುಮಾತಾಡದೆ ಅವರ ಸಹಮತ ಸೂಚಿಸಿದರು. ಮೊದಲೇ
ಹೇಳಿದಂತೆ ಅಲ್ಲಿಯವರೆಗೂ ಕೇವಲ ಹೋರಾಟವಾಗಿದದ್ದು ತದನಂತರ ಚಳುವಳಿಯಾಗಿ ರೂಪಗೊಂಡಿತು. ಸರಕಾರಕ್ಕೆ
ನಡುಕ ಹುಟ್ಟಿಸುವಂತ ಗಂಭೀರ ಸ್ವರೂಪದ ಹೋರಾಟ ಅದು. ಕವಿಗಳ ಜೊತೆಗೆ ಕನ್ನಡ ಸಿನಿಮಾ ರಂಗದ ಎಲ್ಲ ಕಲಾವಿದರ
ಭಾಗವಹಿಕೆ ಹೋರಾಟಕ್ಕೆ ಮತಷ್ಟು ಮೆರಗು ನೀಡಿತ್ತು. ನಾಡಿನ ಸಮಸ್ತ ಜನತೆ ಅವರ ಬೆಂಬಲಕ್ಕೆ ಕೈ ಜೋಡಿಸಿದರು
. ನಂತರ ಏನ್ ಅಯಿತ್ತೆಂದು ಹೇಳುವ ಅವಶ್ಯಕತೆ ಇಲ್ಲ. ಡಾ|| ರಾಜ್ ಬಗ್ಗೆ ಹೇಳುವಾಗ ಗೋಕಾಕ್ ಚಳುವಳಿ
ಬಗ್ಗೆ ಉಲ್ಲೀಖಿಸದಿದ್ದರೆ ಅದು ಅಕ್ಷಮ್ಯ ಅಪರಾಧವಾಗುತ್ತದೆ. ಮುಂದಿನ ದಿನಗಳಲ್ಲಿ ರಾಜ್ ಪುತ್ರರು
ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲು ಶುರು ಮಾಡಿದ ಮೇಲೆ ದೊಡ್ಡವರು ಸಿನಿಮಾ ಮಾಡುವುದು ಕ್ರಮೇಣ ಕಡಿಮೆ
ಮಾಡಿದ್ದರು. ಮನಸ್ಸಿಗೆ ಘಾಸಿ ಎನಿಸಿದ ಕೆಲ ಪತ್ರಿಕಾ ವರಿದಿಗಳು ಅವರನ್ನು ಇನ್ನಷ್ಟು ಅಭಿನಯದಿಂದ
ದೂರ ಉಳಿಯುವಂತೆ ಮಾಡಿತು ಅಂದರೆ ಅದು ತಪ್ಪಲ್ಲ.
ಹಠಕ್ಕೆ ಬಿದ್ದಂತೆ
ವಿವಾದವು ದೊಡ್ಡವರನ್ನೂ ಕಾಡಿತ್ತು. ಅವರ ಹೆಸರು ಕೆಲ ನಟಿಯರೊಂದಿಗೆ ಥಳುಕಿ ಹಾಕಿಕೊಂಡಿತಾದರೂ - ನೋಡಿದಷ್ಟು
ನಿಜವಲ್ಲ, ಕೇಳಿದಷ್ಟು ಸತ್ಯವಲ್ಲ ಎಂಬುದು ಅಷ್ಟೇ ಕಟು ಸತ್ಯ. ಕೆಲ ಬುದ್ದಿಜೀವಿಗಳು, ಸ್ವಯಂ ಪತ್ರಕರ್ತರೆನಿಸಿಕೊಂಡವರು,
ದೊಡ್ಡವರು ಮಣ್ಣಲ್ಲಿ ಮಣ್ಣಾದ ಮೇಲೂ ಅವರನ್ನು ಬೆಂಬಿಡದಂತೆ ಕಾಡಿದ್ದು ಒಂದು ವಿಪರ್ಯಾಸವೇ ಸರಿ. ಹಾಗೆಯೇ
ಡಾ|| ರಾಜ್ ಅವರ ಶಾರೀರ ಎಂದೇ ಬಿಂಬಿತರಾಗಿದ್ದ ಪಿ.ಬಿ ಶ್ರೀನಿವಾಸ್ ಕನ್ನಡದಲ್ಲಿ ಸಾವಿರಾರು ಹಾಡುಗಳನ್ನು
ಹಾಡಿದ್ದಾರೆ. ೧೯೭೪ ಸಂಪತ್ತಿಗೆ ಸವಾಲ್ ಚಿತ್ರದಲ್ಲಿ ಮೊದಲ ಬಾರಿಗೆ ಡಾ ರಾಜ್ ಹಾಡಿದರು, ನಂತರ ಬಹುತೇಕ
ತಮ್ಮ ಎಲ್ಲಾ ಸಿನಿಮಾಗಲ್ಲಿ ತಾವೇ ಹಾಡಲು ಶುರು ಮಾಡಿದರು. ಇಂತಹ ವಿಚಾರಕ್ಕೆ ಕಾದು ಕುಳಿತ್ತಿದ್ದ
ಕೆಲವರು, ರಾಜಕುಮಾರ್ ಅವರು ಪಿಬಿಎಸ್ ಅವರ ಕನ್ನಡ ವೃತ್ತಿ ಬದುಕನ್ನು ಕಸಿದುಕೊಂಡರು ಎಂದು ಸುಕಾ ಸುಮ್ಮನೆ
ಆರೋಪಿಸಿದ್ದರು ಎಂದು ಸಹ ಹೇಳಲಾಗುತ್ಹಿದೆ..ಒಬ್ಬ ಸಂಗೀತ ಜ್ಞಾನವೇ ಇಲ್ಲದ ಮನುಷ್ಯ - ಸ್ವರ, ಸಂಗತಿಗಳನ್ನ
ಲೀಲಾ-ಜಾಲ ಹಾಡುವುದನ್ನು ನೋಡಿ ಖುಷಿ ಪಟ್ಟವರೆಷ್ಟೋ ಹಾಗೆಯೇ ಅಸೂಯೆ ಪಟ್ಟವರೆಷ್ಟೋ. ಈ ವಿಚಾರಗಳನ್ನು
ಇಲ್ಲಿ ಬರೆಯದೆ ಸಹ ಇರಬಹುದಿತ್ತು, ಆದರೆ ತಮ್ಮ ವಿತ್ತಂಡ ವಾದಗಳನ್ನೇ ಸರಿ ಎಂದು ಕೊಂಡಿರುವ ಕೆಲವರು,
ಯಾರೋ ಹೇಳಿದ ಕಥೆಗಳನ್ನ ನಂಬಿ, ನಾವು ದೇವರೆಂದೇ ಪೂಜಿಸುವ ಡಾ|| ರಾಜ್ ಹೆಸರಿಗೆ ಮಸಿ ಬಳಿಯುವ ಕೆಲಸವನ್ನು
ಮೂಕ ಪ್ರೇಕ್ಷಕರಾಗಿ ನೋಡುವ ದೌರ್ಭಾಗ್ಯ ನಮ್ಮದಾಗಬಾರದು.
ಅದೊಂದು ಕರಾಳ ಅಮಾವಾಸ್ಯೆಯ
ದಿನ, ವನದೇವತೆಯು ಯುಗ ಪುರುಷನನ್ನು ನೋಡಲಿಚ್ಛಿಸಿದಳು. ಕಾಡುಗಳ್ಳ ವೀರಪ್ಪನ್ ತನ್ನ ಸಹಚರರೊಂದಿಗೆ
ಬಂದು ಡಾ|| ರಾಜ್ ಅವರನ್ನು ಅಪಹರಿಸಿದ್ದ. ಇಡೀ ಕರ್ನಾಟಕವೇ ರಣರಂಗ ವಾಗಿತ್ತು. ೧೦೮ ದಿನಗಳ ವನವಾಸ
ಮುಗಿಸಿ ಬಂದಿದ್ದ ರಾಜ್ ಅವರ ಮುಖದ ಕಳೆ ಕುಂದಿತ್ತು, ಮಂಡಿ ನೋವು ಇನ್ನಷ್ಟು ಉಲ್ಬಣವಾಗಿತ್ತು. ಆ
ವೇಳೆಗಾಗಲೇ ನನಗೆ ಡಾ|| ರಾಜ್ ಎಂದರೆ ಕೇವಲ ಒಂದು ಹೆಸರಲ್ಲ, ಅದೊಂದು ಅದ್ಭುತ ಶಕ್ತಿ ಎಂದು ತಿಳಿಯಿತು.
೨೦೦೬, ಏಪ್ರಿಲ್
೧೨, ವಿಶ್ವ ಕಂಡ ಶ್ರೇಷ್ಠ ನಟ, ದಕ್ಷಿಣ ಚಿತ್ರ ಲೋಕದ ಆಧಾರ ಸ್ತ್ಹಂಬಗಳಲ್ಲಿ ಒಬ್ಬರೆನಿಸಿದ, ಕಲಾ
ಸರಸ್ವತಿಯ ಮಾನಸ ಪುತ್ರ ಡಾ|| ರಾಜ್ ನಮ್ಮೆಲ್ಲರಿಂದ ಬಹು ದೂರ ಸಾಗಿದ್ದರು. ಅಭಿಮಾನಿಗಳಿಂದ, ಅಭಿಮಾನಿಗಳಿಗೋಸ್ಕರ
ಬದುಕಿದ್ದ ಒಂದು ಮುತ್ತು ಅಭಿಮಾನಿಗಳಿಂದಾನೆ ಅಂತ್ಯಕ್ರಿಯೆ ಮಾಡಿಸಿಕೊಂಡ ಪುಣ್ಯವಂತ.
ಹೌದು- ಮನುಜ ದೇವರಾಗಲು
ಸಾಧ್ಯವಿಲ್ಲಾ ಆದರೆ ದೇವರೇ ಮನುಜನಾದರೆ? ಡಾ|| ರಾಜ್ ಹಾಗೆ ಬದುಕಿದ್ದವರು
ವಿಶ್ವ ಮಾನವ ಸಂದೇಶ
ಸಾರಬಲ್ಲ ಯೋಗ್ಯ ವ್ಯಕ್ತಿ ಡಾ|| ರಾಜ್ ಎಂದು ಕನ್ನಡದ ಮಹಾನ್ ಕವಿ ಕುವೆಂಪು ಹೇಳಿದ್ದು ಯಾರು ಮರೆತಿಲ್ಲ.
ತಂದೆ ಎಂದರೆ, ಮಗನೆಂದರೆ,
ಗಂಡನೆಂದರೆ, ಅಣ್ಣನೆಂದರೆ, ತಮ್ಮನೆಂದರೆ, ತಾತನೆಂದರೆ ಹೀಗೆ ಇರಬೇಕು ಎಂದು ತೋರಿಸಿಕೊಟ್ಟವರು. ನಯಕ್ಕೆ
ಅವರು ಪರ್ಯಾಯ ನಾಮ, ವಿನಯಕಂತು ಶ್ರೇಷ್ಠ ಉದಾಹರಣೆ,
ಮುಂದೆಂದೂ ಮತ್ತೊಬ್ಬ ರಾಜಕುಮಾರ ಹುಟ್ಟಿಬರಲು ಸಾಧ್ಯವೇ? ಅವರ ಚಿತ್ರಗಳು ನಮಗೆಲ್ಲ ಒಂದು
ಮಾದರಿ. ಅವರ ನುಡಿ ಸಿಹಿ ಮುತ್ತು, ಅದು ಸುಂದರ, ಸ್ವಚ್ಛ, ಸರಳ, ಸೌಜನ್ಯ ಪೂರ್ಣ ಮತ್ತು ಸೌಹಾರ್ದ
ಮಯ ಭಾಷೆ. ಭಾವವು ಅದರಂತೆಯೇ. ಪ್ರೊಫೆಸರ್ ಕೃಷ್ಣೆ ಗೌಡರು ಹೇಳುವಂತೆ - ಕನ್ನಡವನ್ನು ಇಷ್ಟು ಸ್ಪಷ್ಟವಾಗಿ
ಮಾತನಾಡುವ, ಅಲ್ಪ ಪ್ರಾಣ, ಮಹಾ ಪ್ರಾಣವನ್ನು ಚಾಚೂ ತಪ್ಪದೆ ಉಚ್ಚರಿಸುವ, ಕನ್ನಡವನ್ನು ಇದಕ್ಕಿಂತ
ಸುಂದರವಾಗಿ ಮಾತನಾಡಲು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಭಾಷೆಯ ಮೇಲೆ ಅವರು ಹಿಡಿತ ಸಾಧಿಸಿದ್ದರು.
ಈ ದಿನ ಆ ಮಹಾ ಮಾಣಿಕ್ಯನನ್ನ
ನೆನಯುತಾ, ಮತ್ತೆ ಹುಟ್ಟಿ ಬರಲಿ ಎಂದು ಆಶಿಸೋಣ.
ಚಿತ್ರಸೆಲೆ - Google
ಮಾಹಿತಿಸೆಲೆ - Wikipedia
ರಚನೆ - ತಿಲಕ್
ಟ್ವಿಟ್ಟರ್ - @Cricket_Lama
ಚಿತ್ರಸೆಲೆ - Google
ಮಾಹಿತಿಸೆಲೆ - Wikipedia
ರಚನೆ - ತಿಲಕ್
ಟ್ವಿಟ್ಟರ್ - @Cricket_Lama




Comments
Post a Comment